

ಶಿವಮೊಗ್ಗ: ಅಜೇಯ ಸಂಸ್ಕೃತಿ ಬಳಗದಿಂದ ಕುವೆಂಪು ರಂಗಮAದಿರದಲ್ಲಿ ಅ.7ರ ಸಂಜೆ 6ಕ್ಕೆ ಕಾವ್ಯ ಸಲ್ಲಾಪ ಶೀರ್ಷಿಕೆಯಡಿ ಕನ್ನಡ ಕವಿಗಳ ಕಾವ್ಯಾಧಾರಿತ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಅಧ್ಯಕ್ಷ ಜೋಯಿಸ್ ರಾಮಾಚಾರ್ ತಿಳಿಸಿದರು.
ಇದುವರೆಗೆ ಹಳೆಯ ಚಲನಚಿತ್ರ ಗೀತೆಗಳನ್ನು ಹಾಡುವ ಅನೇಕ ಕಾರ್ಯಕ್ರಮಗಳನ್ನು ವಿವಿಧ ಸಂಘ ಸಂಸ್ಥೆಗಳು ಆಯೋಜಿಸಿವೆ. ಅದು ಎಲ್ಲರಿಗೂ ಇಷ್ಟವಾಗುವ ಸಂಗತಿಯೂ ಹೌದು. ಆದರೆ ಈಗ ಕವಿಗಳ ಸಾಹಿತ್ಯವನ್ನು ಚಲನಚಿತ್ರ ಗೀತೆಗಳಿಗೆ ಬಳಸಿಕೊಂಡಿರುವುದನ್ನೇ ಗಾಯಕರು ಹಾಡುತ್ತಿರುವುದು ವಿಶೇಷವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಚಲನಚಿತ್ರ ಗೀತೆಗಳೊಂದಿಗೆ ಕವಿಗಳ ಪರಿಚಯ ಮಾಡಿಕೊಡಲಾಗುತ್ತದೆ. ಗಾಯಕರಾದ ಬೆಂಗಳೂರಿನ ಮಂಗಳಾ ರವಿ, ಶ್ರೀರವಿ, ಶಿವಮೊಗ್ಗದ ಗಾಯಕರಾದ ಪೃಥ್ವಿ ಗೌಡ, ಪಾರ್ಥ ಚಿರಂತನ್ ಹಾಡುಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ತಿಳಿಸಿದರು.
ಸಂಜೆ 7.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೈಗಾರಿಕೋದ್ಯಮಿ ಬಿ.ಸಿ.ನಂಜುAಡಶೆಟ್ಟಿ ಅವರನ್ನು ಅಭಿನಂದಿಸಲಾಗುತ್ತದೆ. ಸರ್ಜಿ -Ëಂಡೇಶನ್‌ನ ಮುಖ್ಯಸ್ಥ ಡಾ.ಧನಂಜಯ ಸರ್ಜಿ, ಉದ್ಯಮಿ ಎಚ್.ಎಸ್.ಶಿವಶಂಕರ್ ಉಪಸ್ಥಿತರಿರುತ್ತಾರೆ ಎಂದರು.
ಬಳಗದ ಕಾರ್ಯದರ್ಶಿ ಆರ್.ಅಚ್ಯುತರಾವ್, ಪ್ರಮುಖರಾದ ಶಿವಮೊಗ್ಗ ವಿನಯ್, ನಾಗೇಶ್, ಕುಮಾರ ಶಾಸಿö, ಹರೀಶ್, ಚೇತನ್ ಇದ್ದರು.