ಓಶಿಯಲ್ ಪರ್ಲ್‌ನಲ್ಲಿ ಪೂರ್ಣ ಸುರಕ್ಷತಾ ಕ್ರಮ, ಗ್ರಾಹಕರಿಗೆ ಸ್ವಚ್ಛತೆ, ಸುರಕ್ಷಿತ ಸೇವೆ

ocean
Published on

ಮಂಗಳೂರು: ಲಾಕ್‌ಡೌನ್ ತೆರವು ಬಳಿಕ ಗ್ರಾಹಕರಿಗೆ ಅತ್ಯಂತ ಸುರಕ್ಷಿತ ಸೇವೆ ನೀಡಲು ‘ದಿ ಓಶಿಯನ್ ಪರ್ಲ್ ಸಮೂಹ’ ಸಂಪೂರ್ಣ ಸಿದ್ಧಗೊಂಡು ಜೂನ್ 8ರಿಂದ ತನ್ನೆಲ್ಲ ಸೇವೆಗಳನ್ನು ಪೂರ್ಣ ಪ್ರಮಾಣದಲ್ಲಿ ಮರು ಆರಂಭಿಸಿದೆ.

ಆಹಾರ ಮತ್ತು ಆತಿಥ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ‘ದಿ ಓಶಿಯನ್ ಪರ್ಲ್ ಸಮೂಹ’ ಕಳೆದೊಂದು ದಶಕದಿಂದ ಗುರುತಿಸಿಕೊಂಡಿದೆ. ಇತ್ತೀಚಿನ ಕೋವಿಡ್-19 ಪಿಡುಗು ಸುರಕ್ಷತೆ ಮತ್ತು ಸ್ವಚ್ಛತಾ ಅಭ್ಯಾಸಗಳಿಗೆ ಹೆಚ್ಚಿನ ಮಹತ್ವ ನೀಡುವಂತೆ ಮಾಡಿದ್ದು, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕೇಂದ್ರ ಸರ್ಕಾರದ ಸೂಚನೆಯಂತೆ ಓಶಿಯಲ್ ಪರ್ಲ್ ಸಮೂಹದಲ್ಲೂ ಉನ್ನತ ಮಟ್ಟದ ನೈರ್ಮಲ್ಯ ಮತ್ತು ಸ್ವಚ್ಛತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ‘ದಿ ಓಶಿಯನ್ ಪರ್ಲ್ ಸಮೂಹ’ ಸಮೂಹ ಸಂಸ್ಥೆಗಳ ಉಪಾಧ್ಯಕ್ಷ ಬಿ.ಎನ್.ಗಿರೀಶ್ ತಿಳಿಸಿದ್ದಾರೆ.

ಸ್ಯಾನಿಟೈಸೇಶನ್ ಕಡ್ಡಾಯ: ಹೋಟೆಲ್‌ಗೆ ಬರುವ ಅತಿಥಿಗಳು, ಸಿಬ್ಬಂದಿ ಸಹಿತ ಪ್ರತಿಯೊಬ್ಬರ ಕೈಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ದೇಹದ ಉಷ್ಣತೆ ಪರಿಶೀಲನೆ, ಪಾದರಕ್ಷೆಗಳ ಸ್ಯಾನಿಟೈಸೇಶನ್, ಲಗೇಜ್‌ಗಳನ್ನು ರೋಗಾಣು ಮುಕ್ತಗೊಳಿಸುವಿಕೆ, ಎಲ್ಲ ಸಾಧನಗಳಿಗೆ ಸ್ಯಾನಿಟೈಸೇಶನ್ ಕಡ್ಡಾಯವಾಗಿದೆ. ದೈಹಿಕ ಅಂತರ ಪಾಲನೆಗೆ ನೆಲದಲ್ಲಿ ಗುರುತು ಮಾಡಲಾಗಿದೆ. ಎಲ್ಲರಿಗೂ ಮಾಸ್ಕ್ ಮತ್ತು ಕೈಗವಸುಗಳ ಪೂರೈಕೆ, ಜತೆಗೆ ಚೆಕ್‌ಇನ್ ಮತ್ತು ಚೆಕ್‌ಔಟ್‌ಗಳನ್ನು ಡಿಜಿಟಲ್ ವ್ಯವಸ್ಥೆಗೆ ಪರಿವರ್ತಿಸಲಾಗಿದೆ. ಗ್ರಾಹಕರು ಉಳಿದುಕೊಳ್ಳುವ ಕೊಠಡಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಆಹಾರ ಪೂರೈಕೆಯಲ್ಲಿ ಸ್ಪರ್ಶ ರಹಿತ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ಸುರಕ್ಷಿತ ಅಂತರ: ಹೋಟೆಲ್ ಸಂಪೂರ್ಣ ಆವರಣವನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಗ್ರಾಹಕರು ಕುಳಿತುಕೊಳ್ಳುವ ಟೇಬಲ್‌ಗಳನ್ನು ಆರು ಆಡಿ ಅಂತರಕ್ಕೆ ಹೊಂದಿಕೊಂಡು ಇರಿಸಲಾಗಿದೆ. ಬಫೆಯಲ್ಲೂ ಸುರಕ್ಷತೆ ಕಾಯ್ದುಕೊಳ್ಳಲಾಗುತ್ತಿದೆ. ಸುರಕ್ಷತಾ ಮತ್ತು ಹೌಸ್‌ಕೀಪಿಂಗ್ ವಿಭಾಗದ ಸಿಬ್ಬಂದಿ ಪಿಪಿಇ ಕಿಟ್ ಧರಿಸುತ್ತಾರೆ. ಶೆಫ್‌ಗಳು ಮುಖಗವಸು, ಟೋಪಿ, ಗ್ಲೌಸ್ ಧರಿಸಿಯೇ ಖಾದ್ಯಗಳನ್ನು ತಯಾರಿಸುತ್ತಾರೆ. ಎಲ್ಲರಿಗೂ ಆರೋಗ್ಯ ಸುರಕ್ಷತಾ ತಜ್ಞರಿಂದ ತರಬೇತಿ ನೀಡಲಾಗಿದೆ.

ಅತಿಥಿಗಳ ಸೇವೆಗೆ ಸಿದ್ಧ: ಮಂಗಳೂರಿನ ಕೊಡಿಯಾಲ್‌ಬೈಲ್‌ನ ದಿ ಓಶಿಯನ್ ಪರ್ಲ್, ಕಾಪಿಕಾಡ್‌ನ ದಿ ಓಶಿಯನ್‌ಪರ್ಲ್ ಇನ್, ಉಡುಪಿಯ ದಿ ಓಶಿಯನ್ ಪರ್ಲ್, ಹುಬ್ಬಳ್ಳಿಯ ದಿ ಓಶಿಯನ್ ಪರ್ಲ್ ರೆಸಾರ್ಟ್ ಮತ್ತು ಸ್ಪಾ, ಮಂಗಳೂರಿನ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ಗಳು ಕಾರ್ಯಾಚರಣೆ ಆರಂಭಿಸಿದ್ದು, ಎಲ್ಲ ಕಡೆಯೂ ಸುರಕ್ಷತಾ ಕ್ರಮ ಅನುಸರಿಸಲಾಗುತ್ತಿದೆ. ಆಹಾರದ ಮೆನುಗಳನ್ನು ಸದ್ಯದ ಸ್ಥಿತಿಗತಿಗಳಿಗೆ ಹೊಂದಿಕೊಂಡಂತೆ ಉನ್ನತೀಕರಿಸಲಾಗಿದ್ದು, ಆರೋಗ್ಯಕರ ಮತ್ತು ನೈರ್ಮಲ್ಯಯುತ ವಾತಾವರಣದೊಂದಿಗೆ ಅತಿಥಿಗಳ ಸೇವೆಗೆ ಸದಾ ಸಿದ್ಧವಾಗಿದೆ ಎಂದು ಬಿ.ಎನ್.ಗಿರೀಶ್ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net