ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ

New Project (7)
Published on

ಸುಳ್ಯ: ಬೆಳ್ಳಾರೆ- ದರ್ಖಾಸು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕಿ ಭಾಗೀರಥಿ ಮುರುಳ್ಯ ವೀಕ್ಷಿಸಿದರು.

ಅಧಿಕಾರಿಗಳು, ಗುತ್ತಿಗೆದಾರರ ಜತೆ ಚರ್ಚಿಸಿ ಕಾಮಗಾರಿ ಶೀಘ್ರ ಮುಗಿಸಲು ಸೂಚಿಸಿದರು. ಡಿಸೆಂಬರ್ ತಿಂಗಳ ಮೊದಲು ಕಾಮಗಾರಿ ಮುಗಿಸಲು ಶಾಸಕರು ಸೂಚಿಸಿದರು.

ಲೋಕೋಪಯೋಗಿ ಇಂಜಿನಿಯರ್, ಅರಣ್ಯ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು, ಪ್ರಮುಖರು, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ಪ್ರಮುಖರಾದ ಬಾಲಕೃಷ್ಣ ಕೀಲಾಡಿ, ಶ್ರೀನಾಥ್ ರೈ ಬಾಳಿಲ, ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಶಾಂತಾರಾಮ ಕಣಿಲೆಗುಂಡಿ, ಶೇಖರ ಮಡ್ತಿಲ, ಪದ್ಮನಾಭ ಬೀಡು, ನವೀನ್ ಕುಮಾರ್ ರೈ ತಂಬಿನಮಕ್ಕಿ, ಮೋನಪ್ಪ ತಂಬಿನಮಕ್ಕಿ ಪ್ರೇಮಚಂದ್ರ ಬೆಳ್ಳಾರೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net