

ನಾಪೋಕ್ಲು: ಇಲ್ಲಿಗೆ ಸಮೀಪದ ಕಕಬ್ಬೆ ಕಾಫಿ ತೋಟಗಳಿಗೆ ಶಾಸಕರು ಹಾಗೂ ಮಾಜಿ ಉಪಮಂತ್ರಿ ಡಾ.ಅಶ್ವತ್ಥನಾರಾಯಣ್ ಮಳೆ ಹಾನಿ ವೀಕ್ಷಣೆಗೆ ಭೇಟಿ ನೀಡಿದರು.
ಕಕ್ಕಬೆ ಪಟ್ಟಣಕೆ ಬಂದು ನಾಲಡಿ ಗ್ರಾಮದ ಕಾಫಿ ತೋಟಕ್ಕೆ ಭೇಟಿ ನೀಡಿ, ಬೆಳೆ ಹಾನಿ ವೀಕ್ಷಣೆ ಮಾಡಲಾಯಿತು. ಈ ಸಮಯದಲ್ಲಿ ಕಕ್ಕಬೆ ಕುಂಜಿಲ ಗ್ರಾಮ ಪಂಚಾಯಿತಿಯ ಗ್ರಾಮಸ್ಥರು, ಕಾಫಿ ಬೆಳೆ, ಕರಿಮೆಣಸು ಸಮಸ್ಯೆ, ರಸ್ತೆ ಹಾನಿ, ವಿದ್ಯುತ್ ತೊಂದರೆ, ಆನೆಯ ಉಪಟಳ ಇತರ ತೊಂದರೆಗಳನ್ನು ಪರಿಹರಿಸುವಂತೆ ಮನವಿ ಮಾಡಿದರು.
ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಪ್ರಮುಖರಾದ ರವಿ ಕಾಳಪ್ಪ, ರಬಿನ್ ದೇವಯ್ಯ, ಸುವಿನ್, ಕಿರಣ್ ಕಾರ್ಯಪ್ಪ, ಸಿ.ಜಗದೀಶ್, ಎಂ.ರಮೇಶ್, ಬಿ.ನಂದ, ಸಂತು ಸುಬ್ರಮಣಿ, ರಘು, ಎ.ಕುಶಾಲಪ್ಪ, ಪಿ.ಸುಬ್ರಮಣಿ, ಕಸ್ತೂರಿ, ಸಿ.ರೋಷನ್, ಎಂ.ಆದೇಶ್, ಎಂ.ಪಳಂಗಪ್ಪ, ಸಿ.ಸರು ಅಪ್ಪಚು ಇದ್ದರು.