ಪಾದಚಾರಿ ರಸ್ತೆ ನಿರ್ಮಾಣ ಕಾಮಗಾರಿ ವೀಕ್ಷಣೆ

ಪಾದಚಾರಿ ರಸ್ತೆ ನಿರ್ಮಾಣ ಕಾಮಾಗಾರಿಯನ್ನು ಶಾಸಕ ಪೊನ್ನಣ್ಣ ವೀಕ್ಷಿಸುತ್ತಿರುವುದು
ಪಾದಚಾರಿ ರಸ್ತೆ ನಿರ್ಮಾಣ ಕಾಮಾಗಾರಿಯನ್ನು ಶಾಸಕ ಪೊನ್ನಣ್ಣ ವೀಕ್ಷಿಸುತ್ತಿರುವುದು
Published on

ವಿರಾಜಪೇಟೆ: ಇಲ್ಲಿನ ಕಾವೇರಿ ಪದವಿ ಕಾಲೇಜಿನಿಂದ ನಗರದವರೆಗೆ ನಡೆಯುತ್ತಿರುವ ಪಾದಚಾರಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಭಾನುವಾರ ಶಾಸಕ ಎ. ಎಸ್.ಪೊನ್ನಣ್ಣ ವೀಕ್ಷಿಸಿದರು.

ಅನ್ಯ ಕಾರ್ಯ ನಿಮಿತ್ತ ಈ ಮಾರ್ಗದಲ್ಲಿ ಸಂಚರಿಸುವ ಸಂದರ್ಭ ಕಾಮಗಾರಿ ವೀಕ್ಷಿಸಿದ ಶಾಸಕರು, ಗುಣಮಟ್ಟ ಕಾಯ್ದುಕೊಳ್ಳುವ ಮೂಲಕ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net