ಸಂಸ್ಕಾರ ಶಾಲೆಯಲ್ಲಿ ಚಂದ್ರಯಾನ-3 ವೀಕ್ಷಣೆ

h24-sanskara
Published on

ಹುಬ್ಬಳ್ಳಿ: ಇಲ್ಲಿನ ಕೇಶ್ವಾಪುರದ ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಾಗಿ ಬುಧವಾರ ಚಂದ್ರಯಾನ-3 ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಚಂದ್ರಯಾನ-3 ಯಶಸ್ವಿಯಾದ ಬಳಿಕ ದೇಶಭಕ್ತಿ ಹಾಡುಗಳನ್ನು ಮಕ್ಕಳು ಹಾಡಿದರು. ನಂತರ ಭಾರತ ಮಾತಾ ಕೀ ಜೈ ಎಂದು ಜಯಘೊಷ ಮೊಳಗಿಸಿದರು. ವಿದ್ಯಾರ್ಥಿ ಸಂಸತ್​ನ ಪ್ರಧಾನಿ ಫೆಬಿನ್ ಸಹುಲ್, ವಿದ್ಯಾರ್ಥಿಗಳಾದ ಹರ್ಷ ವಾಳ್ವೇಕರ, ಸಂಪದ ಶೀಲವಂತರ, ಪ್ರಣವ ಕೆ. ಮಾತನಾಡಿದರು. ಸಿಎಒ ವಿನೋದ ಜೆ.ಎಸ್., ಪ್ರಾಚಾರ್ಯು ನಳಿನಾ ಪಿ.ಸಿ., ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net