

ಬಾಳೆಹೊನ್ನೂರು: ಪಟ್ಟಣದ ಮುಖ್ಯರಸ್ತೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಿಂದ ಚಿಕ್ಕಮಗಳೂರು ರಸ್ತೆಯ ರೋಟರಿ ವೃತ್ತದವರೆಗೆ ನಡೆಯುತ್ತಿರುವ ವಿದ್ಯುತ್ ದೀಪದ ಕಂಬದ ಯುಜಿ ಕೇಬಲ್ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಶಾಸಕರ 50 ಲಕ್ಷ ರೂ.ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಪಟ್ಟಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಿಂದ ರೋಟರಿ ವೃತ್ತದವರೆಗೆ ಒಟ್ಟು 36 ಬೀದಿ ದೀಪಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೇಬಲ್‌ಗಳನ್ನು ಬಾಕ್ಸ್ ಚರಂಡಿ ಒಳಗೆ ಯುಜಿ ಕೇಬಲ್‌ಗೆ ಮೀಸಲಿಟ್ಟ ಜಾಗದಲ್ಲಿ ಅಳವಡಿಸುವುದನ್ನು ಬಿಟ್ಟು ುಟ್‌ಪಾತ್ ಬದಿಯಲ್ಲಿ ಅಳವಡಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಲಿದ್ದು, ಮುಂದೆ ವಿದ್ಯುತ್ ಅವಘಢ ಸಂಭವಿಸುವ ಸಾಧ್ಯತೆ ಇದೆ. ಇದರಿಂದಾಗಿ ಕೂಡಲೇ ಗುತ್ತಿಗೆದಾರರು, ಅಧಿಕಾರಿಗಳು ಗಮನಿಸಿ ಅಂಡರ್‌ಗ್ರೌಂಡ್ ಮೂಲಕವೇ ವಿದ್ಯುತ್ ಕೇಬಲ್ ಅಳವಡಿಸಬೇಕು ಎಂದು ಮಹಮ್ಮದ್ ರಫೀಕ್ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಈ ಹಿಂದೆ ರಸ್ತೆ ಅಗಲೀಕರಣ ಮಾಡುವ ವೇಳೆ ಅಂಡರ್ ಗ್ರೌಂಡ್ ಕೇಬಲ್‌ಗಳಿಗಾಗಿ ಬಾಕ್ಸ್ ಚರಂಡಿ ನಿರ್ಮಿಸಲಾಗಿದೆ. ಆದರೆ ಗುತ್ತಿಗೆದಾರರು ವಿದ್ಯುತ್ ಕೇಬಲ್‌ಗಳನ್ನು ಹೊರಭಾಗದಲ್ಲಿ ಅಳವಡಿಸುತ್ತಿರುವುದು ಅವೈಜ್ಞಾನಿಕವಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನಹರಿಸಬೇಕು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ಹನ್ೀ ಹೇಳಿದ್ದಾರೆ.