ಜಾತಿ ಗಣತಿ ವರದಿಗೆ ವಿರೋಧ ಸಲ್ಲ

protest stock-vector-protest-logo-retro-style-hand-popular-protest-261798572
Published on

ಮೈಸೂರು: ಜಾತಿ ಗಣತಿ ವರದಿಯನ್ನು ಬಿಜೆಪಿ ಹಾಗೂ ಜೆಡಿಎಸ್ ವಿರೋಧಿಸುತ್ತಿರುವುದು ಸರಿಯಲ್ಲ. ಒಂದು ವೇಳೆ ವರದಿಯ ಮೂಲಪ್ರತಿ ಕಳವಾಗಿದ್ದರೆ, ಘಟನೆ ನಡೆದ ವೇಳೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವೇ ಅದಕ್ಕೆ ಕಾರಣ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಆರೋಪಿಸಿದರು.

  • ಅಂದಿನ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರೇ ಕಳವು ಮಾಡಿಸಿರಬಹುದು. ಜತೆಗೆ, ಅದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವರದಿಯೇ ಆಗಿದೆ. ಹೀಗಾಗಿ ಅದನ್ನು ವಿರೋಧಿಸುವುದು ಸರಿಯಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
  • ರಾಜೀನಾಮೆ ನೀಡಿ ಹೊರಬರಲಿ: ಡಿಸಿಎಂ ಆಗಿರುವ ಡಿ.ಕೆ.ಶಿವಕುಮಾರ್ ವರದಿ ವಿರೋಧಿಸುವ ಒಂದು ಸಮುದಾಯದ ಪತ್ರಕ್ಕೆ ಸಹಿ ಹಾಕಬಾರದಿತ್ತು. ಸಚಿವ ಸಂಪುಟದಲ್ಲಿರುವವರು ಒಂದು ವೇಳೆ ವರದಿ ಸಮರ್ಥಿಸಿಕೊಳ್ಳಲಾಗದಿದ್ದರೆ ರಾಜೀನಾಮೆ ನೀಡಿ ಹೊರಬರಲಿ ಎಂದು ತಾಕೀತು ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರವಿನಂದನ್, ಎಸ್.ರಾಜೇಶ್, ಲೋಕೇಶ್ ಮಾದಾಪುರ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net