

ಶೃಂಗೇರಿ: ಹಾಸನದಿಂದ ತಾಲೂಕಿಗೆ ತೆರೆದ ವಾಹನದಲ್ಲಿ ನಂದಿನಿ ಹಾಲು ಪೂರೈಕೆ ಮಾಡುತ್ತಿರುವುದನ್ನು ಆಕ್ಷೇಪಿಸಿ ಹಾಲು ಮಾರಾಟಗಾರರು ಸೋಮವಾರ ತಡವಾಗಿ ಬಂದ ಹಾಲನ್ನು ವಾಪಾಸ್ ಕಳುಹಿಸಿದ್ದಾರೆ.
ಪಟ್ಟಣಕ್ಕೆ ನಿತ್ಯ 8 ರಿಂದ 10 ಸಾವಿರ ಲೀಟರ್ ಪ್ರತಿ ದಿನ ಸರಬರಾಜು ಆಗುತ್ತದೆ. ಆದರೆ ಇಂದು ಹಾಲು ಸರಬರಾಜು ಆಗದಿರುವುದರಿಂದ ಗ್ರಾಹಕರು ಪರದಾಡಿದರು. ಹೊಟೆಲ್ ಮಾಲೀಕರು ಹಾಲು ಇಲ್ಲದೇ ತೊಂದರೆ ಅನುಭವಿಸಿದರು. ಹಾಲು ಪೂರೈಕೆಗಾಗಿ ಪ್ರತ್ಯೇಕ ಕ್ಯಾಂಟರ್ ವ್ಯವಸ್ಥೆ ಇದೆ. ಆದರೆ ಕೆಲವು ದಿನದಿಂದ ತೆರೆದ ಲಾರಿಯಲ್ಲಿ ಪೂರೈಕೆ ಮಾಡುತ್ತಿರುವುದರಿಂದ ಬೆಳಗ್ಗೆ 5.30 ರೊಳಗೆ ಬರುತ್ತಿದ್ದ ಹಾಲು ಇತ್ತೀಚೆಗೆ ತಡವಾಗಿ ಬರುತ್ತಿದೆ. ಇದರಿಂದ ಹಾಲು ವಿತರಕರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಅಲ್ಲದೇ ಹಾಲಿನ ಪ್ಯಾಕೇಟ್‌ಗಳು ಒಡೆದು ಹೋಗುತ್ತಿರುವುದು ಹೆಚ್ಚಾಗಿದೆ. ಇದರಿಂದ ನಷ್ಟದ ಪ್ರಮಾಣ ಹೆಚ್ಚಾಗಿತ್ತು. ಈ ಬಗ್ಗೆ ಹಲವಾರು ಬಾರಿ ಮಾಹಿತಿ ನೀಡಿದರೂ ಕ್ರಮಕೈಗೊಳ್ಳದಿರುವುದರಿಂದ ಹಾಲು ವಿತರಕರು ಹಾಲಿನ ಲಾರಿ ತಡೆದು ವಾಪಾಸ್ ಕಳಿಸಿದ್ದಾರೆ. ಹಾಲುವಿತರಕರಾದ ಜಯಂತ, ಗಣೇಶ್, ನಿತ್ಯಾನಂದ, ವಾಮನಮೂರ್ತಿ, ಆನಂದ ಸ್ವಾಮಿ, ಯತೀಶ, ನಾಗೇಂದ್ರ ಮತ್ತಿತರರು ಇದ್ದರು. ಹಾಲು ಸರಬರಾಜು ಆಗದ ಹಿನ್ನಲೆಯಲ್ಲಿ ಹಾಲಿನ ಪುಡಿ, ಗುಡ್‌ಲ್ೈಗೆ ದಿಢೀರ್ ಬೇಡಿಕೆ ಹೆಚ್ಚಿತ್ತು.