ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ವಿವಿಧ ಸಂಘಟನೆಗಳ ವಿರೋಧ

DJ
Published on

ಕಾರವಾರ: ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ವಿವಿಧ ರಾಜಕೀಯ ಮುಖಂಡರು, ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಕೇಣಿ ಬಂದರು ನಿರ್ಮಾಣಕ್ಕೆ ಮಾಜಿ ಶಾಸಕಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ವಿರೋಧ ವ್ಯಕ್ತಪಡಿಸಿದ್ದಾರೆ. ಬುಧವಾರ ಕೇಣಿಗೆ ಭೇಟಿ ನೀಡಿ ಅವರು ಅಲ್ಲಿನ ಪ್ರಮುಖರ ಜತೆ ಚರ್ಚಿಸಿದರು. ಗುರುವಾರ ಜಿಲ್ಲಾಽಕಾರಿ ಅವರನ್ನು ಭೇಟಿಯಾಗಿ ತಮ್ಮ ಆಕ್ಷೇಪಣೆ ಸಲ್ಲಿಸಿದರು.

ಕೇಣಿಯಲ್ಲಿ ಬಂದರು ನಿರ್ಮಾಣ ಮಾಡಿ, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಿರ್ಲಕ್ಷಿಸಲಾಗಿದೆ. ಯೋಜನೆಯ ಪರಿಸರ ಹಾನಿ ವರದಿಯನ್ನು ವೈಜ್ಞಾನಿಕವಾಗಿ ಮಾಡಿಲ್ಲ. ಯೋಜನೆಯಿಂದ ಸಾವಿರಾರು ಮೀನುಗಾರರು ಹಾಗೂ ಕೃಷಿಕರ ಬದುಕು ನಾಶವಾಗಲಿದೆ. ಈಗಾಗಲೇ ಸೀಬರ್ಡ್, ಕೊಂಕಣ ರೈಲ್ವೆಗೆ ಜಮೀನು ಕಳೆದುಕೊಂಡವರಿಗೆ ಮತ್ತೆ ನಿರಾಶ್ರಿತರಾಗುವ ಆತಂಕ ಕಾಡಿದೆ. ನೌಕಾನೆಲೆಯ ಪಕ್ಕದಲ್ಲೇ ಇರುವುದರಿಂದ ಇದೊಂದು ಸೂಕ್ಷ÷್ಮ ಪ್ರದೇಶವೂ ಹೌದು. ಈಗಾಗಲೇ ಹೊರಗಿನಿಂದ ಬಂದವರು ಮಧ್ಯವರ್ತಿಗಳಾಗಿ ಕಾರ್ಯ ಮಾಡುತ್ತಿದ್ದಾರೆ. ವಿರೋಧ ಮಾಡುವ ಸ್ಥಳೀಯರಿಗೆ ಬೆದರಿಕೆ ಹಾಕುವ ಕಾರ್ಯ ಮಾಡುತ್ತಿದ್ದಾರೆ. ಹಾಗಾಗಿ ಮೀನುಗಾರರು, ಕೃಷಿಕರ ಆತಂಕಕ್ಕೆ ಕಾರಣವಾಗಿದೆ. ಇದರಿಂದ ಕೇಣಿ ಗ್ರೀನ್ ಫೀಲ್ಡ್ ಬಂದರು ಯೋಜನೆಯನ್ನು ಬೇರೆಡೆ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಪ್ರಮುಖರಾದ ರಾಜೇಂದ್ರ ನಾಯ್ಕ, ಹೂವಾ ಖಂಡೇಕರ್ ಹಾಗೂ ಇತರರು ಇದ್ದರು.

ಕಾಂಗ್ರೆಸ್ ಮುಖಂಡರಿಂದಲೂ ವಿರೋಧ

ಕೇಣಿ ಬಂದರು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಜೆಎಸ್‌ಡಬ್ಲುದಂಥ ಪ್ರತಿಷ್ಠಿತ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿರುವುದರಿAದ ಯಾವುದೇ ಕಾರಣಕ್ಕೂ ಯೋಜನೆ ಜಾರಿಯಾಗಬೇಕು ಎಂದು ಸರ್ಕಾರ ಆಸಕ್ತಿ ವಹಿಸಿದೆ. ಆದರೆ, ಕೆಲ ಕಾಂಗ್ರೆಸ್ ನಾಯಕರೂ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಿಂದ ಕೆಪಿಸಿಸಿ ಪದಾಽಕಾರಿಯಾಗಿದ್ದ ಅಂಕೋಲಾದ ಗೋಪಾಲಕೃಷ್ಣ ನಾಯಕ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಯೋಜನೆಗೆ ಅಡಿಗಲ್ಲು ಹಾಕಲಾಗಿತ್ತು. ಈಗ ನಾನು ಸ್ಥಳೀಯರ ಜತೆ ನಿಂತಿದ್ದೇನೆ. ವಿರೋಧ ವ್ಯಕ್ತಪಡಿಸುತ್ತಿದ್ದೇನೆ ಎಂದಿದ್ದಾರೆ.

ಪರಿಸರ ಸಂರಕ್ಷಣಾ ಸಮಿತಿ ವಿರೋಧ

ಕೇಣಿ ಗ್ರೀನ್ ಫೀಲ್ಡ್ ಬಂದರು ನಿರ್ಮಾಣ ಸಂಬಂಧ ನಡೆಸಿರುವ ಪರಿಸರ ಅಧ್ಯಯನ ವರದಿ ಹಲವು ಲೋಪಗಳಿಂದ ಕೂಡಿದ್ದು, ಅದನ್ನು ರದ್ದು ಮಾಡಬೇಕು ಎಂದು ಉಕ ಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿ ಒತ್ತಾಯಿಸಿದೆ.

ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಲಿಖಿತ ಹೇಳಿಕೆ ನೀಡಿರುವ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಹಾಗೂ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಅಶೀಸರ ಅವರು, ರಾಜ್ಯ ಜೀವ ವೈವಿಧ್ಯ ಮಂಡಳಿ 2020 ರಲ್ಲಿ ಕೇಣಿಗೆ ಭೇಟಿ ನೀಡಿ ಅಲ್ಲಿ ಅತಿ ಅಪರೂಪದ ನೈಸರ್ಗಿಕ ಜೀವ ವೈವಿಧ್ಯ ತಾಣವನ್ನು ಗುರುತಿಸಿತ್ತು. ನಂದಿ ದೇವರ ಬೆಟ್ಟದ ಕಾಡು ಅತಿ ವಿಶಿಷ್ಟವಾಗಿದೆ. ಸಮುದ್ರದ ಒಳಗೆ ನಿರ್ಮಾಣ ಮಾಡುವುದರಿಂದ ಜೀವ ವೈವಿಧ್ಯಕ್ಕೆ, ನಂದಿ ದೇವರ ಬೆಟ್ಟಕ್ಕೆ ನಷ್ಟವಾಗಲಿದೆ ಎಂದಿದ್ದಾರೆ. ಕೇಣಿ ಹಾಗೂ ಸುತ್ತಲಿನ ಪ್ರದೇಶಗಳು ಹೆಚ್ಚು ಮೀನು ಉತ್ಪಾದನೆಯ ಪ್ರದೇಶಗಳಾಗಿವೆ. 10 ಸಾವಿರಕ್ಕೂ ಹೆಚ್ಚು ಮೀನುಗಾರರಿಗೆ ಆಶ್ರಯ ನೀಡಿದ್ದು, ವಾರ್ಷಿಕ 200 ಕೋಟಿ ರೂ. ಮೀನು ಉತ್ಪಾದನೆ ಮಾಡಲಾಗುತ್ತದೆ. ಆ ಜನಜೀವನಕ್ಕೆ ನಷ್ಟವಾಗಲಿದೆ ಎಂದು ಅಶೀಸರ ತಮ್ಮ ಆಕ್ಷೇಪಣೆ ಸಲ್ಲಿಸಿದ್ದಾರೆ. ಅಲ್ಲದೇ ಒಟ್ಟು 16 ಮೌಲ್ಯಯುತ ಅಂಶಗಳನ್ನು ತಮ್ಮ ಆಕ್ಷೇಪಣಾ ಪತ್ರದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net