ಸರ್ಕಾರದ ವ್ಯಕ್ತಿ ಆಯ್ಕೆಗಿಂತ ಬಾನು ಮುಷ್ತಾಕ್ ಚಿಂತನೆ, ಅಭಿಪ್ರಾಯಕ್ಕೆ ಆಕ್ಷೇಪ

IMG_C_T_Ravi__BJP_2_1_IDBBUA92
Published on

ಸಿಂಧನೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ರನ್ನು ಆಯ್ಕೆ ಮಾಡಿದ್ದು ಇದಕ್ಕೆ ವ್ಯಕ್ತಿ ಆಯ್ಕೆ ತಕರಾರಿಗಿಂತ ಅವರ ಚಿಂತನೆ, ಅಭಿಪ್ರಾಯಕ್ಕೆ ನಮ್ಮ ಆಕ್ಷೇಪ ಇದೆಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

ನಗರದ ಬಿಜೆಪಿ ಮುಖಂಡ ಕೆ.ಕರಿಯಪ್ಪ ನಿವಾಸದಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಾನು ಮುಷ್ತಾಕ್ ಅವರ ಇತ್ತೀಚಿನ ಹೇಳಿಕೆ ಮತ್ತು ಹಿಂದಿನ ಹೇಳಿಕೆಗೆ ವ್ಯತ್ಯಾಸವಿದೆ. ಅವರ ಹಿಂದಿನ ಹೇಳಿಕೆ ನೆಲದ ಸಂಸ್ಕೃತಿಗೆ ಪೂರಕವಾಗಿರಲಿಲ್ಲ. ನೆಲದ ಸಂಸ್ಕೃತಿ ಒಪ್ಪಿ, ಅಪ್ಪಿಕೊಂಡಿದ್ದರೆ ತರಕರಾರಿಲಿಲ್ಲ.

ಭಾವನೆಗಳು ವ್ಯತಿರಿಕ್ತವಾಗಿರುವಾಗ ನಾವೇಕೆ ಒಪ್ಪಿಕೊಳ್ಳಬೇಕು. ಇವರೇ ಇಸ್ಲಾಂ, ಕುರಾನ್, ಮಹ್ಮದ್ ಫೈಗಂಬರ್ ಬಗ್ಗೆ ಅಗೌರವಾಗಿ ಮಾತನಾಡಿದ್ದರೆ, ಸಹಿಸಿಕೊಳ್ಳುತ್ತಿದ್ದಾರಾ ? ಭುವನೇಶ್ವರಿಗೆ ಬುರ್ಕಾ ಹಾಕಲು ಸಾಧ್ಯವಾ ? ಎಂದ ಅವರು, ಬಹುಸಂಖ್ಯಾತರಿಗೆ ಗೌರವ ತರುವಂತೆ ಮಾತನಾಡಬೇಕು. ಅಗೌರವವುಂಟು ಮಾಡುವದಲ್ಲ. ಅವರ ಹೇಳಿಕೆಯನ್ನು ಸಿಎಂ ಸಮರ್ಥಿಸಿಕೊಳ್ಳುತ್ತಿರುವುದು ಸರಿನಾ ? ಎಂದು ಪ್ರಶ್ನಿಸಿದರು.

ಧರ್ಮಸ್ಥಳದ ಪ್ರಕರಣದಲ್ಲಿ ದೊಡ್ಡ ಷಡ್ಯಂತ್ರವೇ ನಡೆದಿದೆ. ಶ್ರದ್ಧಾ ಭಂಗ ಮಾಡುವ ಕುತಂತ್ರ ನಡೆಸಲಾಗುತ್ತಿದೆ. ಕೋಟ್ಯಾಂತರ ಜನರ ಶ್ರದ್ಧಾ ಕೇಂದ್ರ ಧಕ್ಕೆ ತಂದು ಅವನತಿ ಮಾಡುವ ಹುನ್ನಾರು ನಡೆದಿದೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧವೇ ಪಿತೂರಿ ಮಾಡಲಾಗುತ್ತಿದೆ. ಧರ್ಮದ ರಕ್ಷಣೆಗೆ ಬಿಜೆಪಿ ನಿಂತಿದೆ. ಈ ಹಿಂದೆ ತಮಿಳುನಾಡು, ಕೇರಳ ಶ್ರದ್ಧಾಗಳಿಗೆ ಭಂಗವುಂಟು ಮಾಡಿ ಮತಾಂತರ ಮಾಫಿಯಾ ನಡೆಸಲಾಯಿತು. ಇಲ್ಲಿಯೂ ಅಂಥದ್ದೊAದು ಮಾಫಿಯಾ ನಡೆಯುತ್ತಿದೆ. ಇದಕ್ಕೆ ಗಿರೀಶ ಮಟ್ಟಣ್ಣನವರ್ ಸೂತ್ರದಾರಿಯಾಗಿದ್ದಾರೆ ಎಂದರು.

ಮಹೇಶ ತಿಮರೋಡಿ ಸಿಎಂ ವಿರುದ್ಧ ಹೇಳಿಕೆ ಕೊಟ್ಟಿದ್ದಕ್ಕೆ ಗೃಹಮಂತ್ರಿಗಳು ಅವನನ್ನು ಬಂಧಿಸಿ ಎಂದರು. ಅದೇ ಧರ್ಮಾಧಿಕಾರಿ ವಿರುದ್ಧ ತಿಮರೋಡಿ ಆರೋಪ ಮಾಡಿದಾಗ ಹೇಗೆ ಬಂಧಿಸು ಎನ್ನಲಿಲ್ಲ.

ಸೌಜನ್ಯ ಕೊಲೆ ಕೇಸ್ ಎಫ್‌ಐಆರ್‌ನಲ್ಲಿ ಧರ್ಮಾಧಿಕಾರಿ ಹೆಗ್ಗಡೆ, ಅವರ ಕುಟುಂಬದವರ ಹೆಸರಿಲ್ಲ. ಸೌಜನ್ಯ ಕೊಲೆ ಧರ್ಮಾಧಿಕಾರಿ ತಲೆಗೆ ಕಟ್ಟುವ ಕುತಂತ್ರ ನಡೆದಿದೆ. ಇದು ಸಾಧ್ಯವಿಲ್ಲ. ಇಲ್ಲಿ ಸತ್ಯವೇ ಜಯಿಸಲಿದೆ. ಯಾರ ಪಿತೂರಿ, ಕುತಂತ್ರ, ಷಡ್ಯಂತ್ರ ನಡೆಯುವದಿಲ್ಲ.

ಈ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಬಿಜೆಪಿ ನ್ಯಾಯ, ಧರ್ಮದ ಪರ ನಿಂತಿದೆ ಎಂದು ತಿಳಿಸಿದರು. ಡಾ.ಬಸವರಾಜ ಕ್ಯಾವಟರ್, ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಬಿಜೆಪಿ ಮುಖಂಡರಾದ ಕೆ.ಕರಿಯಪ್ಪ, ಕೊಲ್ಲಾ ಶೇಷಗಿರಿರಾವ, ಎಂ.ದೊಡ್ಡಬಸವರಾಜ,

ಬಿಜೆಪಿ ಅಧ್ಯಕ್ಷ ಯಂಕೋಬ ನಾಯಕ, ನಗರ ಅಧ್ಯಕ್ಷ ಸಿದ್ದರಾಮೇಶ ಮನ್ನಾಪುರ, ಆದಿಮನಿ ವೀರಲಕ್ಷಿö್ಮÃ, ಶಶಿಧರ ಹಿರೇಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net