ಪ್ರಾರ್ಥನಾ ಮಂದಿರ ಅನುಮತಿ ಅರ್ಜಿಗೆ ಆಕ್ಷೇಪಣೆ

7 Dwd 3
Published on

ಧಾರವಾಡ: ನಗರದ ಸತ್ತೂರಿನಲ್ಲಿ ಉದ್ದೇಶಿತ ಪ್ರಾರ್ಥನಾ ಮಂದಿರದ ನಿಮÁðಣಕ್ಕೆ ಸಲ್ಲಿಕೆಯಾದ ಪರವಾನಗಿ ಅರ್ಜಿಗೆ ಶ್ರೀರಾಮ ಸೇನೆ ಕಾರ್ಯಕರ್ತರು ಗುರುವಾರ ಆಕ್ಷೇಪಣೆ ಸಲ್ಲಿಸಿದರು.
ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಹಾಗೂ ಸ್ಥಳೀಯರು, ಕ್ರಿಶ್ಚಿಯನ್ ಸಮುದಾಯದ ಜನರಿಲ್ಲದ ಪ್ರದೇಶದಲ್ಲಿ ಕ್ರಿಶ್ಚಿಯನ್ ಪ್ರಾರ್ಥನಾ ಮಂದಿರ ನಿಮÁðಣಕ್ಕೆ ಅನುಮತಿ ನೀಡುವುದು ಸರಿಯಲ್ಲ. ಇಲ್ಲಿ ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕ್ರಿಶ್ಚಿಯನ್ ಧರ್ಮದ ಪ್ರಾರ್ಥನಾ ಮಂದಿರ ನಿಮÁðಣಕ್ಕೆ ಜಾಗ ನೀಡುವುದರಿಂದ ಹಿಂದುಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಭಾವನೆಗೆ ಧಕ್ಕೆಯÁಗುತ್ತದೆ ಎಂದು ಆಕ್ಷೇಪಣೆಯಲ್ಲಿ ವಿವರಿಸಿದ್ದಾರೆ.
ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಬಸವರಾಜ ಅರವಾಳದ, ಅರುಣ ಅರಕೇರಿ, ಪ್ರದೀಪ ಕುಬ್ಯಾಳ, ಉಮೇಶ ದೇವಾಡಿಗ, ವಿ.ಎನ್. ಹಿರೇಗೌಡರ, ಭರತಕುಮಾರ, ಎಂ.ಐ. ಸಜ್ಜನ, ಪಿ.ಎಫ್. ತಟ್ಟಿಮನಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net