ಭಗವಂತನ ಗೀತೋಪದೇಶ ಪಾಲಿಸಿ

Untitled design (9)
ಕುರುಗೋಡಿನ ತಹಸಿಲ್ ಕಚೇರಿ ಸಭಾಂಗಣದಲ್ಲಿ ಶ್ರೀಕೃಷ್ಣ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಕೆ.ರಾಘವೇಂದ್ರ ರಾವ್, ಗ್ರೇಡ್-2 ತಹಸೀಲ್ದಾರ್ ಮಲ್ಲೇಶಪ್ಪ, ಉಪತಹಸೀಲ್ದಾರ್ ವಿಜಯಕುಮಾರ್, ಕೃಷಿ ಅಧಿಕಾರಿ ಎಂ.ದೇವರಾಜ, ಸಮಾಜ ಮುಖಂಡರಾದ ನರಸಪ್ಪ ಯಾದವ್, ಮೃತ್ಯುಂಜಯ ಯಾದವ್, ಡಿ.ಮೂರ್ತಿ, ಶಿಕ್ಷಕರಾದ ಬಸವರಾಜ, ದೊಡ್ಡಬಸಪ್ಪ ಇತರರಿದ್ದರು.
Published on

ಕುರುಗೋಡು: ಮಹಾಭಾರತದಲ್ಲಿ ಶ್ರೀಕೃಷ್ಣ ಅರ್ಜುನಗೆ ಹೇಳಿದ ಸಾರಾಂಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಕೆ.ರಾಘವೇಂದ್ರ ರಾವ್ ಹೇಳಿದರು.


ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಬುಧವಾರ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಗವಂತ ಶ್ರೀಕೃಷ್ಣನ ಗೀತೋಪದೇಶವನ್ನು ಜನರು ಅಳವಡಿಸಿಕೊಂಡರೆ ಸರಳವಾಗಿ ಜೀವನ ನಡೆಸಬಹುದು ಎಂದರು.

ಪಟ್ಟಣದ ಶ್ರೀಕೃಷ್ಣ ದೇವಸ್ಥಾನದಲ್ಲಿ ಕೃಷ್ಣನ ಮೂರ್ತಿಗೆ ವಿಶೇಷ ಹೂ ಅಲಂಕಾರ ಹಾಗೂ ಅಭಿಷೇಕ ಮಾಡಲಾಗಿತ್ತು. ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಅಂಗವಾಗಿ ಯಾದವ ಸಮಾಜದಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net