

ದೊಡವಾಡ: ದೊಡವಾಡ, ಬೆಳವಡಿ ಹಾಗೂ ಉಡಕೇರಿ ಗ್ರಾಮಗಳ ಮಧ್ಯದಲ್ಲಿ ವಿಶಾಲವಾದ ಗುಡ್ಡದ ಮೇಲೆ ನೆಲೆಸಿರುವ ಶ್ರೀ ಗಾಳಿ ಮರಡಿ ವೀರಭದ್ರೇಶ್ವರ ರಥೋತ್ಸವ ಮಂಗಳವಾರ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ ಶ್ರೀ ವೀರಭದ್ರೇಶ್ವರ ಮೂರ್ತಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಪೂಜೆ ಜರುಗಿತು. ಪ್ರತಿ ವರ್ಷದಂತೆ ಈ ವರ್ಷವೂ ವಿಭಿನ್ನವಾಗಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತರು ಮಹಾಪ್ರಸಾದ ಸ್ವೀಕರಿಸಿದರು. ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ನಡೆದ ರಥೋತ್ಸವದಲ್ಲಿ ಭಕ್ತರು ಹರಹರ ಮಹಾದೇವ, ಶ್ರೀ ವೀರಭದ್ರೇಶ್ವರ ಮಹಾರಾಜ ಕೀ ಜೈ ಎಂಬ ಜಯಘೋಷ ಕೂಗುತ್ತ ಭಕ್ತಿಯಿಂದ ರಥ ಎಳೆದರು. ಭಜನೆ, ಡೊಳ್ಳು, ವಿವಿಧ ವಾದ್ಯ ಮೇಳಗಳು ರಥೋತ್ಸವಕ್ಕೆ ಮೆರುಗು ತಂದವು. ಭಕ್ತರು ರಥಕ್ಕೆ ಹಣ್ಣು, ಖಾರಿಕ್ ಎಸೆದು ಭಕ್ತಿ ಸಮರ್ಪಿಸಿದರು. ಸುತ್ತಮುತ್ತಲಿನ ಗ್ರಾಮಸ್ಥರು ರಥೋತ್ಸವದಲ್ಲಿ ಭಾಗವಹಿಸಿದ್ದರು.