

ಬೆಳಗಾವಿ: ಒನಕೆ ಓಬವ್ವಳ ಧೈರ್ಯ, ಸಾಹಸವನ್ನು ಮಹಿಳೆಯರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗ್ಯತವಾಗಿದೆ ಎಂದು ಮೇಯರ್ ಸವಿತಾ ಕಾಂಬಳೆ ಹೇಳಿದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ವೀರ ವನಿತೆ ಒನಕೆ ಓಬ್ಬವ್ವ ಜಯಂತಿಯಲ್ಲಿ ಅವರು ಮಾತನಾಡಿದರು.
ಜಿಪಂ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಮಾತನಾಡಿ, ಒನಕೆ ಓಬವ್ವ ಹೈದರ್ ಅಲಿಯೊಂದಿಗೆ ಏಕಾಂಗಿಯಾಗಿ ಹೋರಾಡಿದ ವೀರ ವನಿತೆಯಾಗಿದ್ದಳು. ಕನ್ನಡ ನಾಡಿನ ವೀರವನಿತೆಯರಾದ ಕಿತ್ತೂರು ಚನ್ನಮ್ಮ, ರಾಣಿ ಅಬ್ಬಕ್ಕರ ಸಾಲಿನಲ್ಲಿ ಇವರನ್ನು ಸಹ ಪರಿಗಣಿಸಲಾಗುತ್ತದೆ ಎಂದರು.
ಕಡೋಳಿ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ಡಾ. ಪ್ರವೀಣಾ ಕೆ.ಎಸ್. ಮಾತನಾಡಿದರು. ಇದೇ ವೇಳೆ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಸ್ ಎಸ್‌ಎಲ್‌ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಉಪ ಮೇಯರ್ ಆನಂದ ಚವ್ಹಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶೈಲ ಕಾಂಬಳೆ, ಪಾಲಿಕೆ ಸದಸ್ಯರಾದ ಸಂದೀಪ ಜೀರಗ್ಯಾಳ, ಉಪ ತಹಸೀಲ್ದಾರ್ ಎಸ್.ಬಿ. ಅಸೋದೆ, ಆದಿ ಜಾಂಬವ ನಿಗಮ ಮಂಡಳಿ ವ್ಯವಸ್ಥಾಪಕ ಬಸವರಾಜ ಚನ್ನಣ್ಣವರ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಮಹಾಂತೇಶ ಜವುಟಗುಂಡಿ, ರಾಯಬಾಗ ಚಲವಾದಿ ಮಠದ ಮಹಾದೇವ, ಗಣ್ಯರಾದ ಉದಯಕುಮಾರ ತಳವಾರ, ಮಲ್ಲೇಶ ಚೌಗುಲೆ, ಮಲ್ಲೇಶ ಕುರಂಗಿ, ಮಹಾದೇವ ತಳವಾರ, ದುರ್ಗೇಶ ಮೇತ್ರಿ, ಮಲ್ಲಿಕಾರ್ಜುನ ರಾಶಿಂಗ, ರಾಜು ಕೋಲಕಾರ, ಸುಬ್ರಮಣ್ಯ ಕಾಂಬಳೆ ಇತರರು ಇದ್ದರು.