

ಮಡಿಕೇರಿ:
ಹೆಣ್ಣುಮಕ್ಕಳಿಗೆ ಸ್ವಯಂರಕ್ಷಣೆ ಜತೆಗೆ ಆತ್ಮವಿಶ್ವಾಸ ಹೆಚ್ಚಳಕ್ಕೆ ಪೂರಕವಾಗಿ ರೂಪಿಸಲಾಗಿದ್ದ ಮಹತ್ವಾಕಾಂಕ್ಷಿ 'ಓಬವ್ವ ಆತ್ಮರP್ಷÀಣೆ ಕಲೆ' ಯೋಜನೆ ಅನುದಾನದ ಕೊರತೆಯಿಂದ ನಿಂತುಹೋಗಿದೆ. ಈ ಹಿಂದಿನ 2 ವರ್ಷಗಳಲ್ಲಿ ರಾಜ್ಯಾದ್ಯಂತ ಇರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿ ಯಶಸ್ವಿಯಾಗಿ ನಡೆದಿದ್ದ ಸ್ವಯಂ ರಕ್ಷಣೆ ತರಬೇತಿಯ ಈ ಯೋಜನೆ ಸ್ಥಗಿತವಾಗಿರುವುದು ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರಸ್ತುತ ದಿನಗಳಿಗೆ ಹೆಚ್ಚು ಅಗತ್ಯವಾಗಿರುವ ಇಂಥ ತರಬೇತಿ ಮುಂದುವರಿಸುವAತೆ ಒತ್ತಾಯ ಕೇಳಿ ಬಂದಿದೆ.
ಮಹಿಳೆಯರ ಮೇಲೆ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಸ್ವಯಂರಕ್ಷಣೆಯ ಕಲೆ ಕಲಿತುಕೊಳ್ಳುವುದು ತುಂಬಾ ಅಗತ್ಯವಾಗಿದೆ. ಅದರಲ್ಲೂ ಶಾಲಾ, ಕಾಲೇಜು, ಉದ್ಯೋಗಕ್ಕೆ ತೆರಳುವ ಹೆಣ್ಣು ಮಕ್ಕಳ ಹೆಚ್ಚಿನ ಪೋಷಕರು ತಮ್ಮ ಮಕ್ಕಳು ಸುರಕ್ಷಿತವಾಗಿ ಮನೆ ತಲುಪುವ ತನಕವೂ ಆತಂಕದಿAದಲೇ ಸಮಯ ದೂಡುತ್ತಿರುತ್ತಾರೆ. ಇಂಥ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಎಳೆ ಪ್ರಾಯದಲ್ಲೇ ಸ್ವಯಂ ರಕ್ಷಣೆಯ ಕಲೆಗಳನ್ನು ಕಲಿಸುವುದರಿಂದ ಅವರಲ್ಲಿ ಆತ್ಮರಕ್ಷಣೆಯ ಕೌಶಲ್ಯ ಹೆಚ್ಚುವುದು ಮಾತ್ರವಲ್ಲದೆ ಆತ್ಮವಿಶ್ವಾಸವೂ ವೃದ್ಧಿಯಾಗುತ್ತದೆ.
ಆರ್ಥಿಕವಾಗಿ ಸ್ಥಿತಿವಂತವರು ತಮ್ಮ ಮಕ್ಕಳಿಗೆ ಖಾಸಗಿಯಾಗಿ ಆತ್ಮರಕ್ಷಣೆಯ ಕಲೆ ಕಲಿಸುತ್ತಾರೆ. ಆದರೆ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗಂತೂ ಇದು ಕೈಗೆಟುಕದ ಕೌಸಲ್ಯ. ಈ ಹಿನ್ನೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ಆತ್ಮರP್ಷÀಣೆಯ ವಿದ್ಯೆ ಹೇಳಿಕೊಡಲು ಸರ್ಕಾರ 'ಓಬವ್ವ ಆತ್ಮರP್ಷÀಣೆ ಕಲೆ' ಯೋಜನೆ ಜಾರಿಗೆ ತಂದಿತ್ತು. 2021ರಲ್ಲಿ ಪ್ರಾಯೋಗಿಕವಾಗಿ ಆರಂಭವಾದ ಈ ಯೋಜನೆ 2021-22 ಮತ್ತು 2022-23ರಲ್ಲಿ ರಾಜ್ಯಾದ್ಯಂತ ಯಶಸ್ವಿಯಾಗಿ ನಡೆದಿದೆ. ಈ ಯೋಜನೆ ಅಡಿಯಲ್ಲಿ ಪುಟ್ಟ ಜಿಲ್ಲೆ ಕೊಡಗಿನಲ್ಲೇ ವಿದ್ಯಾರ್ಥಿನಿಲಯಗಳಲ್ಲಿ 2021-22ನೇ ಸಾಲಿನಲ್ಲಿ 604 ಮತ್ತು 2022-23ರಲ್ಲಿ 585 ವಿದ್ಯಾರ್ಥಿನಿಯರು ಸ್ವಯಂ ರಕ್ಷಣೆಯ ಕಲೆ ಕಲಿತುಕೊಂಡಿದ್ದಾರೆ. ಈ ಯೋಜನೆ ಅನುಷ್ಠಾನದಲ್ಲಿ ಇದ್ದ ವಸತಿ ಶಾಲೆಗಳಲ್ಲೂ ಇದರ ಎರಡರಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಪ್ರಯೋಜನ ಪಡೆದುಕೊಂಡಿದ್ದಾರೆ.
ಈ ಯೋಜನೆ ಅಡಿಯಲ್ಲಿ ವಿದ್ಯಾರ್ಥಿನಿಯರಿಗೆ ಆತ್ಮರP್ಷÀಣೆಗೋಸ್ಕರ ಕರಾಟೆ, ಟೇಕ್ವಾಂಡೋ ಹಾಗೂ ಜೂಡೋ ಹೇಳಿಕೊಡಲಾಗುತ್ತಿತ್ತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ವಸತಿ ಶಾಲೆಗಳಲ್ಲೂ ಈ ಯೋಜನೆ ಜಾರಿಯಲ್ಲಿತ್ತು. ಸರ್ಕಾರ ವತಿಯಿಂದ ಉಚಿತವಾಗಿ ಕೊಡುತ್ತಿದ್ದ ಈ ತರಬೇತಿಗಳು ಖಾಸಗಿಯಾಗಿ ಕಲಿಯಲು ಸಾಧ್ಯವಿರದ ವಿದ್ಯಾರ್ಥಿನಿಯರಿಗೆ ಅನುಕೂಲ ಒದಗಿಸಿಕೊಟ್ಟಿತ್ತು.
ದೌರ್ಜನ್ಯ ಮತ್ತು ಆಕ್ರಮಣಗಳಿಂದ ಮಹಿಳೆಯರಿಗೆ ಸ್ವಯಂ ರP್ಷÀಣೆ ನೀಡುವ ಉz್ದೆÃಶಕ್ಕಾಗಿ ಈ ತರಬೇತಿ ಯೋಜನೆ ರೂಪಿಸಲಾಗಿತ್ತು. ಬ್ಲಾö್ಯಕ್ ಬೆಲ್ಟ್ ಹೊಂದಿರುವ ನುರಿತ ಮಹಿಳಾ ತರಬೇತುದಾರರೇ ವಿದ್ಯಾರ್ಥಿನಿಯರಿಗೆ ಈ ಕಲೆಯನ್ನು ಧಾರೆ ಎರೆಯಲು ನಿಯೋಜಿತರಾಗಿದ್ದರು. ಗೌರವ ಧನ ಆಧಾರದಲ್ಲಿ ಇದಕ್ಕಾಗಿ ಶಿP್ಷÀಕರನ್ನು ನೇಮಿಸಿಕೊಳ್ಳಲಾಗಿತ್ತು. ವಸತಿ ನಿಲಯ ಮತ್ತು ವಸತಿ ಶಾಲೆಯಲ್ಲಿ ವಾರಕ್ಕೆ 2 ಬಾರಿ ತಲಾ ಒಂದು ಗಂಟೆಯAತೆ ತರಬೇತಿಯ ಟೈಂಟೇಬಲ್ ಇತ್ತು.
ವಸತಿ ನಿಲಯ ಮತ್ತು ವಸತಿ ಶಾಲೆಯ ನಿರ್ವಹಣಾ ವೆಚ್ಚದಲ್ಲೇ ಈ ತರಬೇತಿ ವೆಚ್ಚವನ್ನೂ ಭರಿಸಲಾಗುತ್ತಿತ್ತು. ಶಾಲಾ-ಕಾಲೇಜು ತರಗತಿ ಆರಂಭಕ್ಕೂ ಮೊದಲು ಅಥವಾ ತರಗತಿ ಮುಗಿದ ನಂತರ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವ ಸಮಯದಲ್ಲಿ ಈ ತರಬೇತಿಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಶಾಲೆ, ಶಾಲಾ ಬಸ್ ಮಾತ್ರವಲ್ಲದೆ ಮನೆಯಲ್ಲೂ ಸಂಬAಧಿಕರಿAದಲೂ ಹೆಣ್ಣು ಮಕ್ಕಳ ಮೇಲಿನ ಅಪರಾಧ ಸಂಖ್ಯೆಗಳು ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ದೌರ್ಜನ್ಯದ ವಿರುದ್ಧ ಸ್ವಯಂ ರಕ್ಷಣೆ ಕಲೆ ಕಲಿಸುವ 'ಓಬವ್ವ ಆತ್ಮರP್ಷÀಣೆ ಕಲೆ' ಈ ವರ್ಷ ಏಕಾಏಕಿ ಸ್ಥಗಿತವಾಗಿದೆ.
'2023-24ನೇ ಸಾಲಿನಲ್ಲಿ ಅನುದಾನದ ಕೊರತೆಯಿಂದ 'ಓಬವ್ವ ಆತ್ಮರP್ಷÀಣೆ ಕಲೆ' ಯೋಜನೆಯನ್ನು ಮುಂದುವರಿಸಲು ಸಾಧ್ಯವಾಗಿರುವುದಿಲ್ಲ.,' ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಜು.19ರಂದು ವಿಧಾನಪರಿಷತ್‌ನಲ್ಲಿ ಎಂಎಲ್‌ಸಿ ಕೇಶವಪ್ರಸಾದ್ ಎಸ್. ಅವರ ಪ್ರಶ್ನೆಯೊಂದಕ್ಕೆ ನೀಡಿರುವ ಉತ್ತರದಲ್ಲಿ ಪ್ರತಿಕ್ರಿಯಿಸಿದ್ದಾರೆ. ಹೆಣ್ಣುಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮಹತ್ವದ್ದಾಗಿರುವ 'ಓಬವ್ವ ಆತ್ಮರP್ಷÀಣೆ ಕಲೆ'ಯಂಥ ಯೋಜನೆಗೆ ಕೊಡಲು ಸರ್ಕಾರದ ಬಳಿ ಅನುದಾನ ಇಲ್ಲ ಎನ್ನುವ ಮಾತು ಚರ್ಚೆಗೆ ಕಾರಣವಾಗಿದೆ. ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಎನ್ನುವ ಒತ್ತಾಯ ಕೇಳಿಬರುತ್ತಿದೆ.
2023-24ನೇ ಸಾಲಿನಲ್ಲಿ ಅನುದಾನದ ಕೊರತೆಯಿಂದ 'ಓಬವ್ವ ಆತ್ಮರP್ಷÀಣೆ ಕಲೆ' ಯೋಜನೆಯನ್ನು ಮುಂದುವರಿಸಲು ಸಾಧ್ಯವಾಗಿರುವುದಿಲ್ಲ. ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಲ್ಲಿ
ಬಾಲಕಿಯರ ರಕ್ಷಣೆಗಾಗಿ ಮಹಿಳಾ ನಿಲಯ ಮೇಲ್ವಿಚಾರಕರು, ನಿಲಯ ಪಾಲಕರ ನಿಯೋಜನೆ ಹಾಗೂ ರಾತ್ರಿ ಕಾವಲುಗಾರರು ಕಾರ್ಯ ನಿರ್ವಹಿಸುವುದರ ಜತೆಗೆ ಭದ್ರತೆಯ ದೃಷ್ಠಿಯಿಂದ ಕಾಂಪೌAಡ್ ನಿರ್ಮಾಣ ಮತ್ತು ಬಾಲಕಿಯರ ಸುರಕ್ಷತೆಯ ಎಲ್ಲಾ ದೃಷ್ಟಿಯಿಂದ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಸಿ.ಸಿ. ಕ್ಯಾಮೆರಾವನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮವಹಿಸಲಾಗಿರುತ್ತದೆ.
ಶಿವರಾಜ ಎಸ್. ತಂಗಡಗಿ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ