

ಗದಗ: ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಶನಿವಾರ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಅನ್ನರ್ಪೂಣ ಅವರು ವೀರ ವನಿತೆ ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸರ್ಮಪಿಸಿ ಮಾತನಾಡಿದ ಅವರು, ಇತಿಹಾಸವನ್ನು ಗಮನಿಸಿದಾಗ ವೀರ ಮಹಿಳೆಯ ಪಟ್ಟಿಯಲ್ಲಿ ಒನಕೆ ಓಬವ್ವ ಅಗ್ರಗಣ್ಯರಾಗಿದ್ದಾರೆ. ಅವರ ಧೈರ್ಯ, ಸಾಹಸ ಎಲ್ಲ ಕಾಲಕ್ಕೂ ಎಲ್ಲ ಮಹಿಳೆಯರಿಗೂ ಆದರ್ಶ ಪ್ರಾಯ ಎಂದು ನುಡಿದರು.
ನಗರಸಭೆ ಪೌರಾಯುಕ್ತ ಗಂಗಪ್ಪ ಎಂ, ಆರಕ ವೃತ್ತ ನೀರಿಕ ಎಸ್.ಎಂ.ಶಿರಗುಪ್ಪಿ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಹಲವರು ಇದ್ದರು.