ಪವನ ಶಾಲಾ ಸಂಸತ್ ಪದಾಧಿಕಾರಿಗಳ ಪದಗ್ರಹಣ

9 Dwd 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಪವನ ಆಂಗ್ಲ ಮಾಧ್ಯಮ ಶಾಲೆಯ 2025- 26ನೇ ಸಾಲಿನ ಶಾಲಾ ಸಂಸತ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ಜರುಗಿತು.

ಸೋನಲ್ ಶಿರಗುಪ್ಪಿ ಪ್ರಧಾನಮಂತ್ರಿ, ಕುಶಾಲಗೌಡ ಪಾಟೀಲ ಸ್ಪೀಕರ್, ಜಾಗೃತಿ ಕೆ. ಡೆಪ್ಯುಟಿ ಸ್ಪೀಕರ್ ಹಾಗೂ ಇತರ ಪದಾಧಿಕಾರಿಗಳು ಅಽಕಾರ ವಹಿಸಿಕೊಂಡರು. ಪವನ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ರತ್ನಾ ಎಸ್. ಪಾಟೀಲ ಅವರು ನೂತನ ಪದಾಧಿಕಾರಿಗಳಿಗೆ ಖಾತೆ ಹಂಚಿ ಅಭಿನಂದಿಸಿದರು. ಪ್ರಾಚಾರ್ಯ ವಿಕ್ರಂ ಮಹಶಬ್ದೆ ಪ್ರಮಾಣವಚನ ಬೋಧಿಸಿದರು. ಕಾರ್ಯದರ್ಶಿ ಮಹೇಶ ಎಸ್. ಪಾಟೀಲ, ಮುಖ್ಯ ಸಂಯೋಜಕಿ ಸವಿತಾ ಕಂಬಿ, ಎಜಿಎಂ ನೀಲಕಂಠ ಸಾಳುಂಕೆ, ಚೀಫ್ ಅಕಾಡೆಮಿಕ್ ಆಫೀಸರ್ ಸವಿತಾ ದುಬೆ, ಇತರರಿದ್ದರು. ಸ್ನೇಹಾ ಹಾಗೂ ಖುಷಿ ನಿರೂಪಿಸಿದರು. ವೈಷ್ಣವಿ ಸ್ವಾಗತಿಸಿದರು. ಪ್ರಿಯಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net