

ವಿಜಯಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಯುವ ಟಕ ಹಾಗೂ ಮಹಿಳಾ ಟಕಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಏ.18ರಂದು ಬೆಳಗ್ಗೆ 10.30ಕ್ಕೆ ನಗರದ ಲಿಂಗಾಯತ ಸಾಂಸತಿಕ ಸಮುದಾಯ ಭವನದಲ್ಲಿ ಜರುಗಲಿದೆ.
ಬುರಣಾಪುರದ ಆರೂಢ ಆಶ್ರಮದ ಯೋಗೇಶ್ವರಿ ಮಾತಾಜಿ ಸಾನ್ನಿಧ್ಯ, ಮಹಾಸಭಾದ ರಾಜ್ಯ ಉಪಾಧ್ಯಕ್ಷ ಸಿದ್ಧರಾಮಪ್ಪ ಉಪ್ಪಿನ ಅಧ್ಯಕ್ಷತೆ ವಹಿಸುವರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಯುವ ಟಕದ ಅಧ್ಯಕ್ಷ ಅಬ್ಬಿಗೆರೆ ಮನೋಹರ ಕಾರ್ಯಕ್ರಮ ಉದ್ಘಾಟಿಸುವರು.
ರಾಜ್ಯ ಮಹಿಳಾ ಟಕದ ಅಧ್ಯೆ ಮುಕ್ತಾಂಬಾ, ನಿರ್ದೇಶಕ ರಾಜಶೇಖರ ಸೀರಿ, ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ ಸಾಹುಕಾರ ಕುಮಸಗಿ, ಸಿಂದಗಿ ಶಾಸಕ ಅಶೋಕ ಮನಗೂಳಿ,ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯರಾದ ರಮೇಶ ಭೂಸನೂರ,ಅರುಣ ಶಹಾಪುರ, ಮಹಾಸಭಾ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ, ರಾಜ್ಯ ಯುವ ಟಕದ ಉಪಾಧ್ಯಕ್ಷ ಕುಮಾರಗೌಡ ಹರನಾಳ,ಜಿಲ್ಲಾ ಯುವ ಟಕದ ಅಧ್ಯಕ್ಷ ಓಂಕಾರ ಅಥರ್ಗಾ, ಜಿಲ್ಲಾ ಮಹಿಳಾ ಟಕದ ಅಧ್ಯೆ ಶಶಿಕಲಾ ಸ್ಥಾವರಮಠ ಉಪಸ್ಥಿತರಿರುವರು.