ವಿದ್ಯಾರ್ಥಿ ಪರಿಷತ್ ಚುನಾವಣೆಯಲ್ಲಿ ಪ್ರಮಾಣವಚನ ಸ್ವೀಕಾರ

21
Published on

ಮೈಸೂರು: ನಗರದ ಶ್ರೀವಿವೇಕ ವಿದ್ಯಾಲಯ ಪದವಿಪೂರ್ವ ಕಾಲೇಜು ಹಾಗೂ ವಿವೇಕ ಎಕ್ಸೆಲ್ ಅಕಾಡೆಮಿಯಿಂದ ಆಯೋಜಿಸಿದ್ದ ವಿದ್ಯಾರ್ಥಿ ಪರಿಷತ್ ಚುನಾವಣೆಯ ಪ್ರಮಾಣವಚನ ಸ್ವೀಕಾರ ಆಯೋಜಿಸಲಾಗಿತ್ತು.

ನಗರದ ಸಹಾಯಕ ಪೊಲೀಸ್ ಆಯುಕ್ತ ಸಂದೇಶ್‌ಕುಮಾರ್ ಮಾತನಾಡಿ, ಪರಿಶುದ್ಧ, ಪರಿಪೂರ್ಣ ಜೀವನಕ್ಕೆ ವಿದ್ಯಾರ್ಥಿಗಳು ಗಮನಿಸಲೇಬೇಕಾದ 9 ವಿಚಾರಗಳ ಕುರಿತಾಗಿ ತಿಳಿ ಹೇಳಿದರು. ಗುರಿ, ಸಮಯ ಪ್ರಜ್ಞೆ , ನಿಯಮ ಪಾಲನೆ , ಆಹಾರ ಮತ್ತು ಆರೋಗ್ಯ, ವ್ಯಾಯಾಮ, ಮಾದಕ ವಸ್ತುಗಳ ಎಚ್ಚರಿಕೆ, ಸಾಮಾಜಿಕ ಕಳಕಳಿ, ಸೈಬರ್ ಕ್ರೈಂ ಇವುಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ, ಮಾಜಿ ಎಂಎಲ್‌ಸಿ ಕೆ.ಸಿ.ಪುಟ್ಟಸಿದ್ದಶೆಟ್ಟಿ ಅವರು, ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ವಿವರಿಸಿದರು. ಸಂಸ್ಥೆ ನಿರ್ದೇಶಕ ಎಂ.ಎಸ್.ನಾಗೇಶ್, ವಿದ್ಯಾರ್ಥಿಗಳನ್ನು ಅಭಿನಂದಿಸಿ ವಿದ್ಯಾರ್ಥಿ ಜೀವನದ ಮಜಲುಗಳ ಪ್ರಾಮುಖ್ಯ ತಿಳಿಸಿಕೊಟ್ಟರು. ಆಡಳಿತ ಅಧಿಕಾರಿ ಭವಾನಿ ನಾಗೇಶ್, ಪ್ರಾಂಶುಪಾಲೆ ಕೆ.ಎನ್.ಶಿಲ್ಪಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net