ವಿದ್ಯಾರ್ಥಿ ಸಂಸತ್ ಮಂತ್ರಿಗಳ ಪ್ರಮಾಣವಚನ

h16-shantinath
Published on

ಹುಬ್ಬಳ್ಳಿ: ಶ್ರೀ ಜೈನ ರಾಜಸ್ಥಾನಿ ವಿದ್ಯಾ ಪ್ರಚಾರಕ ಮಂಡಳದಿಂದ ಸಂಚಾಲಿತ ನಗರದ ಶ್ರೀ ಶಾಂತಿನಾಥ ಹಿಂದಿ ಪ್ರೌಢಶಾಲೆಯಲ್ಲಿ ಇಂಟ್ರ್ಯಾಕ್ಟ್ ಕ್ಲಬ್ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿ ಸಂಸತ್ ಮಂತ್ರಿಗಳ ಪದಗ್ರಹಣ ಸಮಾರಂಭವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.

ಮಮತಾ ಚೌಧರಿ (ಅಧ್ಯಕ್ಷೆ), ಜೋಗಾರಾಮ ಚೌಧರಿ (ಉಪಾಧ್ಯಕ್ಷ), ರವೀನಾ ಸೇನ್ (ಕಾರ್ಯದರ್ಶಿ), ಪ್ರತಾಪಸಿಂಗ್ ರಾಥೋಡ (ಸಹ ಕಾರ್ಯದರ್ಶಿ), ಸಂತು ಚೌಧರಿ (ಕೋಶಾಧ್ಯಕ್ಷ), ಗೋಮತಿ ಚೌಧರಿ, ರಾಜವೀರ ಪುರೋಹಿತ, ಕರೀಷ್ಮಾ ಚೌಧರಿ, ನರೇಶಕುಮಾರ ದೇವಾಸಿ (ನಿರ್ದೇಶಕರು) ಅವರು ಅಧಿಕಾರ ಸ್ವೀಕರಿಸಿದರು. ಲಿಂಗರಾಜ ಪಾಟೀಲ ಅವರು ಪ್ರಮಾಣ ವಚನ ಬೋಧಿಸಿದರು.

ನರೇಶ ಕುಮಾರ ಮಾಲಿ (ಪ್ರಧಾನ ಸಚಿವ), ಸಂತು ಚೌಧರಿ (ಉಪ ಪ್ರಧಾನ), ಸಂಧ್ಯಾ ಕ್ಯಾರಕಟ್ಟಿ (ಶಿಕ್ಷಣ ಮಂತ್ರಿ), ಓಂಪ್ರಕಾಶ ಗುಪ್ತಾ (ಕ್ರೀಡಾ ಮಂತ್ರಿ), ಅನಿತಾ ಪ್ರಜಾಪತ (ಹಣಕಾಸು), ಪೂಜಾ ರಜಪೂತ (ಸಾಂಸ್ಕೃತಿಕ ಮಂತ್ರಿ), ನರೇಶ ಕುಮಾರ ದೇವಾಸಿ (ಪರಿಸರ ಮಂತ್ರಿ), ಜೋಗಾರಾಮ ಚೌಧರಿ (ಪ್ರಾರ್ಥನಾ ಮಂತ್ರಿ) ಅವರು ಅಧಿಕಾರ ಸ್ವೀಕರಿಸಿದರು. ಮಂಡಳದ ಅಧ್ಯಕ್ಷ ಭವರಲಾಲ್ ಜೈನ್ ಅಧ್ಯಕ್ಷತೆ ವಹಿಸಿದ್ದಲ್ಲದೆ ವಿದ್ಯಾರ್ಥಿ ಸಂಸತ್ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ಪ್ರವಿಣ ಭನ್ಸಾಲಿ, ಇಮ್ಯಾನುಲ್, ಶಿವಪ್ರಸಾದ ಎಲ್., ಕೌಸ್ತುಬ, ಪ್ರಧಾನ ಅಧ್ಯಾಪಕ ವಿಲಾಸ ಪುದಾಲೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net