

ಮಂಗಳೂರು : ಕೆನರಾ ಆರ್ಥೋಪೆಡಿಕ್ ಸೊಸೈಟಿ ವತಿಯಿಂದ ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್ ಸಹಯೋಗದಲ್ಲಿ ‘ಒಯಸಿಸ್ ಕಾನ್-2023’ ದಕ್ಷಿಣ ಭಾರತ ಮಟ್ಟದ ಆರ್ಥೋಪೆಡಿಕ್ ಸರ್ಜನ್‌ಗಳ ಸಮಾವೇಶ ಸೆ.1ರಿಂದ 3ರವರೆಗೆ ನಗರದ
ಇಂಡಿಯಾನ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ.
ಸೆ.1ರಂದು ಸಾಯಂಕಾಲ 5.30ಕ್ಕೆ ನಿಟ್ಟೆ (ಡೀಮ್ಡ್ ಟು ಬಿ ) ವಿಶ್ವ ವಿದ್ಯಾಲಯದ ಪ್ರೊ.ಚಾನ್ಸಲರ್ ಡಾ.ಎಂ.ಶಾಂತರಾಮ ಶೆಟ್ಟಿ ಸಮಾವೇಶ ಉದ್ಘಾಟಿಸಲಿದ್ದಾರೆ. ಆರ್ಥೋಪೆಡಿಕ್ ಅಸೋಸಿಯೇಷನ್ ಸೌತ್ ಇಂಡಿಯನ್ ಸ್ಟೇಟ್ಸ್‌ನ ಅಧ್ಯಕ್ಷ ಡಾ.ಎಸ್.ಶ್ರೀನಿವಾಸ ರೆಡ್ಡಿ
ಅಧ್ಯಕ್ಷತೆ ವಹಿಸಲಿದ್ದಾರೆ. ದಕ್ಷಿಣ ವಲಯದ ಐಜಿ ಡಾ.ಚಂದ್ರಗುಪ್ತ, ಇಂಡಿಯನ್ ಆರ್ಥೋಪೆಡಿಕ್ ಅಸೋಸಿಯೇಷನ್‌ನ ಚುನಾಯಿತ ಅಧ್ಯಕ್ಷ ಡಾ.ರಾಮ್ ಚಡ್ಡಾ, ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಟಕ್ಕರ್, ಕಾರ್ಯದರ್ಶಿ ಡಾ.ಅನೀನ್.ಎನ್.ಕುಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 700ಕ್ಕೂ ಅಧಿಕ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಒಯಸಿಸ್ ಕಾನ್ ಸಂಘಟನಾ ಕಾರ್ಯದರ್ಶಿ ಡಾ.ಸಚ್ಚಿದಾನಂದ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.