

ನ್ಯಾಮತಿ: ತಾಲೂಕಿನ ನರಿಗಿನ ಕೆರೆ ಗ್ರಾಮದ ಮನೆಯೊಂದರ ಮುಂಭಾಗ ಕಾಣಿಸಿಕೊಂಡ 8 ಅಡಿ ಉದ್ದದ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಸೆರೆ ಹಿಡಿದು ಗಂಗವ್ವ ಸರ ಮೀಸಲು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ಹೊನ್ನಾಳಿ ವಲಯ ಅರಣ್ಯಾಧಿಕಾರಿ ಕಿಶೋರ್ ನಾಯ್ಕ ತಿಳಿಸಿದ್ದಾರೆ.
ಸುಮಾರು 8 ಅಡಿ ಉದ್ದದ ಹೆಬ್ಬಾವು 25 ಕೆಜಿ ತೂಕ ಇದ್ದು, ಆಹಾರಕ್ಕಾಗಿ ಬಂದಿರುವುದಾಗಿ ಅಂದಾಜಿಸಲಾಗಿದೆ.
ಸಾರ್ವಜನಿಕರು ಮಾಹಿತಿ ನೀಡಿದ ಕೂಡಲೇ ಅರಣ್ಯ ಇಲಾಖೆಯ ನ್ಯಾಮತಿ ಉಪವಲಯ ಅರಣ್ಯ ಅಧಿಕಾರಿ ಶಿವಯೋಗಿ ನೇತೃತ್ವದಲ್ಲಿ ಹೊನ್ನಾಳಿ ಅರಣ್ಯ ರಕ್ಷಕ ವಸಂತ, ನಾಗರಾಜ್, ವಾಚರ್‌ಗಳಾದ ಮೋಹನ್, ಹನುಮಂತ, ವಿಕಾಸ್ ಸಹಕಾರದೊಂದಿಗೆ ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು.