

ನ್ಯಾಮತಿ: ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮ ದೇವರಾದ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಅಮ್ಮನ ಕೇಲನ್ನು ಮೆರವಣಿಗೆ ಮಾಡುವ ಮೂಲಕ ಬುಧವಾರ ಗ್ರಾಮದ ಗಡಿಯಲ್ಲಿ ವಿಸರ್ಜನೆ ಮಾಡಲಾಯಿತು.
ಉತ್ಸವ ಮೂರ್ತಿಗಳಾದ ಶ್ರೀ ಆಂಜನೇಯ, ಬಸವೇಶ್ವರ, ಭೂತಪ್ಪ ಹಾಗೂ ಮರಿಯಮ್ಮ, ದುರ್ಗಮ್ಮ ದೇವರ ಸಮ್ಮುಖದಲ್ಲಿ ಮಂಗಳ ವಾದ್ಯಗಳೊಂದಿಗೆ ಆಚರಿಸಲಾಯಿತು.
ಗ್ರಾಮದಲ್ಲಿ ಮಳೆ, ಬೆಳೆ, ಗ್ರಾಮಗಳ ಸಮೃದ್ಧಿಗಾಗಿ ಶ್ರಾವಣ ಮಾಸದ ಮೊದಲ ಸೋಮವಾರದಂದು ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಶ್ರಾಮಣ ಮಾಸದ ಮೂರು ವಾರಗಳಂದು ಪೂಜೆ ಸಲ್ಲಿಸಲಾಗಿದೆ. ಪ್ರತಿ ಶ್ರಾವಣ ಬುಧವಾರ ಸಂಜೆ ಭಜನೆ, ಪುರಾಣ ನಡೆಸಿ ಕಡೆಯ ದಿನ ವಿಶೇಷ ಪೂಜೆ, ನೈವೇದ್ಯ, ಪ್ರಸಾದ ವಿತರಣೆ ಮೂಲಕ ಗ್ರಾಮದ ಗಡಿಯಲ್ಲಿ ವಿಸರ್ಜನೆ ಮಾಡಲಾಯಿತು.