ಟ್ರ್ಯಾಕ್ಟರ್'ನಿಂದ ಬಿದ್ದು ಕಾರ್ಮಿಕ ಸಾವು

Crime Logo
Published on

ನ್ಯಾಮತಿ: ತಾಲೂಕಿನ ಮುಸ್ಸೇನಾಳು-ಕುಂಕುವ ಗ್ರಾಮದ ಕ್ರಾಸ್ ಬಳಿ ಈಚೆಗೆ ಸಿಮೆಂಟ್ ಇಟ್ಟಿಗೆ ಸಾಗಿಸುತ್ತಿದ್ದ ಟ್ರಾೃಕ್ಟರ್‌ನಿಂದ ಕೂಲಿ ಕಾರ್ಮಿಕ ಆಯಾತಪ್ಪಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ಯುವರಾಜ ನಾಯ್ಕ (27) ಮೃತ ಕೂಲಿ ಕಾರ್ಮಿಕ. ಸಿಮೆಂಟ್ ಇಟ್ಟಿಗೆ ಹೊತ್ತುಕೊಂಡು ಹುಣಸೋಡು ಗ್ರಾಮದಿಂದ ಕುಂಕುವ ಗ್ರಾಮಕ್ಕೆ ಬರುವಾಗ ಟ್ರಾೃಕ್ಟರ್ ಟ್ರ್ಯಾಲಿಯಲ್ಲಿ ಕುಳಿತಿದ್ದ ಕೂಲಿ ಕಾರ್ಮಿಕ ಆಯಾತಪ್ಪಿ ಕೆಳಗೆ ಬಿದ್ದಿದ್ದು, ಆತನ ಮೇಲೆ ಇಟ್ಟಿಗೆಗಳು ಬಿದ್ದು ಮೃತಪಟ್ಟಿದ್ದಾರೆ.

ಅಪಘಾತಕ್ಕೆ ಚಾಲಕನ ಅತಿಯಾದ ವೇಗವೇ ಕಾರಣ ಎನ್ನಲಾಗಿದ್ದು, ಚಾಲಕ ತಲೆಮರೆಸಿಕೊಂಡಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೃತರ ಸಹೋದರ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net