ಅಡಕೆ ಕೊನೆಯಲ್ಲಿ ಕೊಳಕ ಮಂಡಲ ಹಾವು!

Published on

ನ್ಯಾಮತಿ: ಕುಂಕುವ ಗ್ರಾಮದ ರೈತರೊಬ್ಬರ ತೋಟದ ಅಡಕೆ ಮರದಲ್ಲಿ ಕೊನೆ ಮಧ್ಯೆ ಹಾವು ಮಲಗಿರುವುದು ಕಂಡು ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ರೈತ ಸುನೀಲ್ ಅದರ ವಿಡಿಯೋ ತೆಗೆದು ಫೇಸ್‌ಬುಕ್‌ಗೆ ಪೋಸ್ಟ್ ಮಾಡಿದ್ದಲ್ಲದೆ, ವಾಟ್ಸಪ್ ಸ್ಟೇಟಸ್‌ಗೆ ಫೋಟೊ ಮತ್ತು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಅಡಕೆ ಕೊಯ್ಲು ಶುರುವಾಗಿದ್ದು, ಈ ಸಮಯದಲ್ಲಿ ಎಚ್ಚರ ವಹಿಸುವಂತೆಯೂ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net