ಗಿರಿಸಿದ್ದಪ್ಪನ ಗುಡ್ಡಕ್ಕೆ ಹಾಲಸ್ವಾಮಿ ಪಾದಯಾತ್ರೆ

nyamathi halaswamy
Published on

ನ್ಯಾಮತಿ: ತಾಲೂಕಿನ ಗೋವಿಕೋವಿ ಶ್ರೀ ಸದ್ಗುರು ಹಾಲಸ್ವಾಮಿ ಬೃಹನ್ಮಠದ ಶ್ರೀ ವಿಶ್ವಾರಾಧ್ಯ ಮಾಹಾಲಿಂಗ ಹಾಲಸ್ವಾಮಿಗಳು ಶ್ರೀಮಠದಿಂದ ಕಂಚುಗಾರನಹಳ್ಳಿ ಸಮೀಪದ ಶ್ರೀ ಗವಿಸಿದ್ದೇಶ್ವರ ದೇವಸ್ಥಾನಕ್ಕೆ ಸೋಮವಾರ ಪಾದಯಾತ್ರೆ ಕೈಗೊಂಡರು.

ಕಂಚುಗಾರನಹಳ್ಳಿ ಸಮೀಪದ ಶ್ರೀ ಗವಿಸಿದ್ದೇಶ್ವರ (ಗಿರಿಸಿದ್ದಪ್ಪನ ಗುಡ್ಡಕ್ಕೆ) ದೇವಸ್ಥಾನಕ್ಕೆ ಆಗಮಿಸಿ ವಿವಿಧ ಪೂಜಾ ಕಾರ್ಯಕ್ರಮದ ಕೈಂಕರ್ಯಗಳಲ್ಲಿ ಭಾಗವಹಿಸಿದ್ದರು. ಶ್ರೀಗಳ ಪಾದಯಾತ್ರೆಗೆ ಗ್ರಾಮದ ಭಕ್ತರೊಂದಿಗೆ ಭಾಗವಹಿಸಿ ಯಶಸ್ವಿಗೊಳಿಸಿದರು.

ಮಠದ ಭಕ್ತರಾದ ಜಗಣ್ಣ, ಸಂತೋಷ, ಪ್ರೇಮಕುಮಾರ್, ವಿನೇಶ್, ವಿನಯ್, ಜಗದೀಶ್, ರವೀಶ್, ರೇಣುಕಸ್ವಾಮಿ, ಬಸವಯ್ಯ, ಹಾಲಸ್ವಾಮಿ ಭಾಗಿಯಾಗಿದ್ದರು.

ದೇವಸ್ಥಾನದಲ್ಲಿ ಗೋವಿನಕೋವಿಯ ಶ್ರೀ ಬಸವೇಶ್ವರ ಭಜನಾ ಮಂಡಳಿ ಭಜನಾ ಕಾರ್ಯಕ್ರಮ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net