

ನ್ಯಾಮತಿ: ತಾಲೂಕಿನ ಯರಗನಾಳ್- ಕುದುರೆಕೊಂಡ ಗ್ರಾಮ ಸಮೀಪದ ಉಜ್ಜಿನಿಮಟ್ಟಿ ಬಳಿ ಚಿರತೆಯೊಂದು ಸೋಮವಾರ ರಾತ್ರಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಈ ಮಾರ್ಗದಲ್ಲಿ ಕಾರೊಂದರಲ್ಲಿ ತೆರಳುತ್ತಿದ್ದ ಪ್ರಯಾಣಿಕರು ಮೊಬೈಲ್ ಕ್ಯಾಮರಾದಲ್ಲಿ ಚಿರತೆಯ ಚಲನವಲನದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಚಿರತೆ ಓಡಾಟದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ದ್ವಿಚಕ್ರ ವಾಹನ ಸವಾರರು, ಜಮೀನುಗಳಿಗೆ ತೆರಳುವ ರೈತರು ಸಂಜೆ ವೇಳೆ ಎಚ್ಚರಿಕೆಯಿಂದ ಓಡಾಡುವಂತೆ ಅರಣ್ಯ ಇಲಾಖೆ ಸಲಹೆ ನೀಡಿದೆ.
ಚಿರತೆ ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಸಾರ್ವಜನಿಕರ ಒತ್ತಾಯಿಸುತ್ತಿದ್ದು, ಈ ಹಿಂದೆ ಕೆಲವು ತಿಂಗಳ ಹಿಂದೆ ಇದೇ ಪ್ರಾಂತ್ಯದಲ್ಲಿ ಚಿರತೆ ಚಲನವಲನದ ದೃಶ್ಯ ಮನೆಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.