

ನ್ಯಾಮತಿ: ತಾಲೂಕಿನ ಸಂತ ಸೇವಾಲಾಲರ ಜನ್ಮಸ್ಥಳ ಸೂರಗೊಂಡನಕೊಪ್ಪದ ಭಾಯಾಗಡ್‌ಗೆ ಉಪ ಸಭಾಪತಿ ರುದ್ರಪ್ಪ ಲಮಾಣಿ ಮೊದಲ ಬಾರಿಗೆ ಭಾನುವಾರ ಸಂಜೆ ಭೇಟಿ ನೀಡಿ ಸೇವಾಲಾಲರ ಆಶೀರ್ವಾದ ಪಡೆದರು.
ಈ ಸಮಯದಲ್ಲಿ ಸಮುದಾಯದ ಮುಖಂಡರು ಅವರನ್ನು ಸನ್ಮಾನಿಸಿದರು.
ಬಂಜಾರ ಸಮುದಾಯದ ಮುಖಂಡ, ಸೇವಾಲಾಲ್ ಮಹಾಮಠದ ದೇವಸ್ಥಾನ ಸಮಿತಿ ನಿರ್ವಹಣಾ ಅಧ್ಯಕ್ಷ ಡಾ.ಈಶ್ವರ್ ನಾಯ್ಕ, ಕಾರ್ಯದರ್ಶಿ ರಾಘವೇಂದ್ರ ನಾಯ್ಕ ದಾವಣಗೆರೆ, ರಾಘವೇಂದ್ರ ನಾಯ್ಕ ಶಿಕಾರಿಪುರ, ನರೇಂದ್ರ ನಾಯ್ಕ, ತಾಂಡ ಅಭಿವೃದ್ಧಿ ನಿಗಮದ ನಿಕಟಪೂರ್ವ ನಿರ್ದೇಶಕ ಮಾರುತಿ ನಾಯ್ಕ, ಸುರೇಂದ್ರ ನಾಯ್ಕ, ದಾವಣಗೆರೆ ಜಯದೇವ್ ನಾಯ್ಕ, ಭೋಜಾನಾಯ್ಕ, ಭೂಪಾಲ ನಾಯ್ಕ, ವೇಂಕಟೇಶ್ ಭಾಯಾಗಡ್, ಓಂಕಾರ ನಾಯ್ಕ, ಶ್ರೀನಿವಾಸ ಸವಳಂಗ ಇತರರು ಇದ್ದರು.