31ರಂದು ಕ್ಕೆ ನ್ಯಾಮತಿಗೆ ಶ್ರೀಶೈಲ ಜಗದ್ಗುರುಗಳ ಆಗಮನ

SHRISHAILA SHREE
Published on

ನ್ಯಾಮತಿ: ನ್ಯಾಮತಿಯಲ್ಲಿ ಭಕ್ತರೊಬ್ಬರು ಹಮ್ಮಿಕೊಂಡಿರುವ ಮಹಾರುದ್ರಾಭಿಷೇಕ ಪೂಜೆ ಕೈಂಕರ್ಯ ನಿಮಿತ್ತ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಡಿ.31ರಂದು ಪಟ್ಟಣಕ್ಕೆ ಆಗಮಿಸಲಿದ್ದಾರೆ.

ಅಂದು ಸಂಜೆ 5ಕ್ಕೆ ಶ್ರೀಗಳು ಆಗಮಿಸಲಿದ್ದು, ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ನೆಹರು ರಸ್ತೆ ಮೂಲಕ, ಕುಂಬಾರ ಬೀದಿ ಅಮ್ಮನ ಮರದ ದೇವಿ ದೇವಸ್ಥಾನ ದವರೆಗೆ ಅದ್ಧೂರಿ ಮೆರವಣಿಗೆ ನಡೆಯಲಿದೆ. ಸ್ಥಳೀಯ ನಿವಾಸಿ ಉದ್ಯಮಿ ಕೆ.ವಿ.ಮನೋಹರ ಅವರ ಮನೆಯಲ್ಲಿ ಶ್ರೀಗಳು ವಾಸ್ತವ್ಯ ಹೂಡಲಿದ್ದು, ಜ.1ರಂದು ಶನಿವಾರ ಬೆಳಗ್ಗೆ ಮಹಾರುದ್ರಾಭಿಷೇಕ ನೆರವೇರಿಸಲಿದ್ದಾರೆ. ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಹೊಸಮನೆ ಶಿವರಾಜಪ್ಪ ಕುಂಬಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net