

ನ್ಯಾಮತಿ: ಬಂಜಾರ ಸಮುದಾಯದ ಏಕತೆ, ಅಸ್ಮಿತೆ ಮತ್ತು ಜನಜಾಗೃತಿಗಾಗಿ ರಾಷ್ಟ್ರೀಯ ಗೋರಸೇನಾ ಸಂಘಟನೆಯು ಬೀದರ್ನಿಂದ ಬೆಂಗಳೂರಿನವರೆಗೆ ಸೇವಾ ರಥಯಾತ್ರೆಯನ್ನು ಹಮ್ಮಿಕೊಂಡಿದೆ ಎಂದು ಮಾಜಿ ಸಂಸದ ಉಮೇಶ್ ಜಾಧವ್ ತಿಳಿಸಿದರು.
ತಾಲೂಕಿನ ಸವಳಂಗ ಗ್ರಾಮದ ವೃತ್ತಕ್ಕೆ ಗೋರಬಂಜಾರ್ ಜನಜಾಗೃತಿ ರಥಯಾತ್ರೆ ಆಗಮಿಸಿದ್ದ ಸಂದರ್ಭದಲ್ಲಿ ತಾಲೂಕಿನ ಬಂಜಾರ ಸಮುದಾಯರು ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ 3,500 ಕ್ಕಿಂತ ಹೆಚ್ಚು ತಾಂಡಗಳಿವೆ. ಸರ್ಕಾರ ರಾಜ್ಯಾದ್ಯಂತ ಇರುವ ಗೋರ ಬಂಜಾರ ಜನಾಂಗದ ಸಂಪೂರ್ಣ ವೈಜ್ಞಾನಿಕ ದತ್ತಾಂಶ ಸಂಗ್ರಹಣೆ ಮಾಡುವ ಅವಶ್ಯಕತೆ ಇದೆ. ಬೀದರ್ನಿಂದ ಹೊರಟಿರುವ ಬಂಜಾರ ಜನ ಜಾಗೃತಿ ಸೇವಾ ರಥಯಾತ್ರೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮುಕ್ತಾಯವಾಗಲಿದೆ ಎಂದರು
ನಮ್ಮ ಸಮಾಜವನ್ನು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ದೃಷ್ಟಿಯಿಂದ, ಬಂಜಾರ ಸಮುದಾಯದ ಹಕ್ಕು ಪ್ರಗತಿ ಪರಿವರ್ತನೆಗಾಗಿ ಗೋರ್ ಸೇನಾ ರಾಷ್ಟ್ರೀಯ ಸಂಘಟನೆಯವರು ಜಾಗೃತಿ ಮೂಡಿಸಲು ರಥಯಾತ್ರೆಯನ್ನು ಆಯೋಜಿಸಿದ್ದಾರೆ ಎಂದು ಹೇಳಿದರು.
ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಭೋಜ್ಯನಾಯ್ಕ, ಮುಖಂಡರಾದ ಗೋಪಾಲನಾಯ್ಕ, ಸೋಮ್ಲಾನಾಯ್ಕ, ಬೋಪಾಲ್ ನಾಯ್ಕ, ಪೀರ್ನಾಯ್ಕ, ತಾತ್ಯಾನಾಯ್ಕ, ಘಂಟ್ಯಾಪುರ ಮಾರುತಿ ನಾಯ್ಕ, ಡಿ.ಆರ್. ಗಿರೀಶ್ನಾಯ್ಕ, ಸಾಲಬಾಲು ಮಂಜುನಾಯ್ಕ, ಬಿಜೆಪಿ ಮುಖಂಡ ಎಂ.ಪಿ. ಬಸವರಾಜು, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಡಿ.ಎಸ್. ಸುರೇಂದ್ರಗೌಡ ಸೇರಿ ಇತರರಿದ್ದರು.