

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ವಾಕರಸಾ ಸಂಸ್ಥೆಯ ಅಧ್ಯಕ್ಷ ಭರಮಗೌಡ (ರಾಜು) ಕಾಗೆ ಹುಬ್ಬಳ್ಳಿ ನಗರ ಸಾರಿಗೆ ಘಟಕಕ್ಕೆ ಮಂಗಳವಾರ ಭೇಟಿ ನೀಡಿ ಸಿಬ್ಬಂದಿ ಅಹವಾಲುಗಳನ್ನು ಆಲಿಸಿ, ಅಧಿಕಾರಿಗಳೊಂದಿಗೆ ರ್ಚಚಿಸಿದರು.
ಸಂಸ್ಥೆಯ ನೌಕರರು ಕರ್ತವ್ಯಕ್ಕೆ ಗೈರಾಗದೇ ಬದ್ಧತೆಯಿಂದ ಕೆಲಸ ನಿರ್ವಹಿಸುವ ಮೂಲಕ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಬೇಕು ಎಂದು ಕರೆ ನೀಡಿದರು.
ಸಂಸ್ಥೆಗೆ ನೂತನವಾಗಿ ಸೇರ್ಪಡೆಗೊಂಡ ನಗರ ಸಾರಿಗೆ ಬಸ್ಸನ್ನೇರಿ ನಗರ ಸಂಚಾರ ಮಾಡಿದರು. ಹು-ಧಾ ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ಶಿದ್ದಲಿಂಗೇಶ, ವಿಭಾಗೀಯ ತಾಂತ್ರಿಕ ಇಂಜಿನಿಯರ್ ಪ್ರವೀಣ ಈಡೂರ, ಘಟಕ ವ್ಯವಸ್ಥಾಪಕ ವಿನಾಯಕ ಸಾಲಿಮಠ, ಸಹಾಯಕ ಭದ್ರತಾ ಅಧಿಕಾರಿ ಜಗದೀಶ ಕೋಳಿ, ಇತರರು ಇದ್ದರು.