

ಕಿಕ್ಕೇರಿ: ಸಮೀಪದ ಕರೋಟಿ ಗ್ರಾಮದಲ್ಲಿ ರೈತರೊಬ್ಬರ ಜಮೀನಿನಲ್ಲಿ ಸೋಮವಾರ ತೆಂಗು, ಅಡಕೆ ಸಸಿಗಳನ್ನು ಕಿಡಿಗೇಡಿಗಳು ನಾಶಮಾಡಿದ್ದಾರೆ. ಗ್ರಾಮದ ರೈತ ನಾಗರಾಜು ಅವರ ತೋಟದಲ್ಲಿ ಬೆಳೆದಿದ್ದ ಸುಮಾರು 2 ವರ್ಷದ 30 ಅಡಕೆ, 25 ತೆಂಗಿನ ಸಸಿಗಳು ಕಿಡಿಗೇಡಿಗಳ ಕೃತ್ಯಕ್ಕೆ ನಾಶವಾಗಿವೆ. ಇದೇ ರೀತಿ ನಾಲ್ಕೈದು ಬಾರಿ ತಮ್ಮ ಜಮೀನಿನಲ್ಲಿ ಕಿಡಿಗೇಡಿಗಳು ತೋಟದಲ್ಲಿನ ಗಿಡಗಳನ್ನು ಹಾಳು ಮಾಡಿದ್ದಾರೆ ಎಂದು ರೈತ ಅಲವತ್ತುಕೊಂಡಿದ್ದಾರೆ. ಈ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.