ಪೌಷ್ಟಿಕ ಆಹಾರ ಸಿರಿಧಾನ್ಯ

SIRIDHANYA
Published on

ಹುಬ್ಬಳ್ಳಿ: ತಾಲೂಕಿನ ವಿಜಯನಗರ ಕಾರ್ಯ ಕ್ಷೇತ್ರದ ಜ್ಞಾನಭಾರತಿ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಿರಿಧಾನ್ಯ ಬಳಕೆ ಕಾರ್ಯಕ್ರಮವನ್ನು ಬುಧವಾರ ಏರ್ಪಡಿಸಲಾಗಿತ್ತು.

ಸಿರಿ ಧಾನ್ಯ ಘಟಕದ ನಿರ್ದೇಶಕ ದಿನೇಶ ಉದ್ಘಾಟಿಸಿ, ಸಿರಿಧಾನ್ಯ ಬಳಕೆ ಮತ್ತು ಅದರ ಮಹತ್ವದ ಬಗ್ಗೆ ಸವಿಸ್ತಾರವಾಗಿ ಮಾಹಿತಿ, ಮಾರ್ಗದರ್ಶನ ನೀಡಿದರು. ಶ್ರೀದೇವಿ ಅಧ್ಯಕ್ಷತೆ ವಹಿಸಿದ್ದರು.

ತಾಲೂಕಿನ ಯೋಜನಾಧಿಕಾರಿ ಸುಧಾ, ವಲಯ ಮೇಲ್ವಿಚಾರಕ ದೇವಿದಾಸ, ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಮಂಜುಳಾ, ಸ್ಥಳೀಯ ಸೇವಾ ಪ್ರತಿನಿಧಿ ಗಂಗಾ, ರತನ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net