ಪೌಷ್ಟಿಕ ಆಹಾರ ಅತ್ಯವಶ್ಯ

04 gubbi 01
Published on

ಗುಬ್ಬಿ: ಪ್ರತಿಯೊಬ್ಬರಿಗೂ ಪೌಷ್ಟಿಕ ಆಹಾರ ಅತ್ಯವಶ್ಯಕವಾಗಿದ್ದು, ಅಪೌಷ್ಟಿಕತೆ ಹೆಚ್ಚಾದರೆ ಅನಾರೋಗ್ಯದಂತ ದೊಡ್ಡ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಸಿಡಿಪಿಒ ಕೃಷ್ಣಮೂರ್ತಿ ತಿಳಿಸಿದರು.

ತಾಲೂಕಿನ ಚಿಕ್ಕ ಕುನ್ನಲಾ ವೃತ್ತದ ಗೋಪಾಲಪುರ ಗ್ರಾಮದಲ್ಲಿ ಪೌಷ್ಟಿಕ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಪೌಷ್ಟಿಕ ಆಹಾರ ಪ್ರತಿಯೊಬ್ಬರಿಗೂ ಸಿಗಬೇಕು ಎಂಬ ಹಿನ್ನೆಲೆಯಲ್ಲಿ ಸರ್ಕಾರ ಪೌಷ್ಟಿಕ ಅಭಿಯಾನ ಕಾರ್ಯಕ್ರಮ ಆಯೋಜಿಸಿದ್ದು, ಇದರ ಮೂಲಕ ಗರ್ಭಿಣಿ, ಬಾಣಂತಿ, ಶಿಶುಗಳಿಗೆ ಮಕ್ಕಳಿಗೆ ಅಪೌಷ್ಟಿಕತೆಯಿಂದ ಆಗುವ ಸಮಸ್ಯೆಗಳ ಬಗ್ಗೆ ಮತ್ತು ಸ್ಥಳಿಯವಾಗಿ ಸಿಗುವಂತಹ ಹಣ್ಣು, ತರಕಾರಿ, ಮೊಟ್ಟೆ, ಮೀನು, ಮಾಂಸ ಸೇರಿ ಪ್ರತಿನಿತ್ಯ ಏನೆಲ್ಲಾ ವಸ್ತುಗಳನ್ನು ತಿನ್ನಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿ ನಂದೀಶ್​ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅನಿಮಿಯದಂತಹ ಗಳಗಂಡ ರೋಗದಂತಹ ಸಮಸ್ಯೆಗಳಿಂದ ಸಾಕಷ್ಟು ಮಹಿಳೆಯರು ನರಳುತ್ತಿದ್ದಾರೆ. ಇದಕ್ಕೆಲ್ಲ ಮೂಲ ಕಾರಣವೇ ಅಪೌಷ್ಟಿಕತೆ ಹಾಗಾಗಿ ಇಲ್ಲಿ ನೀಡುವ ಅರಿವು ಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net