ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ಸಹಕಾರಿ

28-ANP-P 3 BALLI BAILU
ಬಳ್ಳಿಬೈಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಧಾನ ಮಂತ್ರಿ ಪೋಷಣ ಅಭಿಯಾನದಲ್ಲಿ ಪಾಲ್ಗೊಂಡಿರುವ ಮಕ್ಕಳು.
Published on

ಆನಂದಪುರ: ಎಳೆ ವಯಸ್ಸಿನ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಉತ್ತಮವಾಗಿರಲು ಪೌಷ್ಟಿಕ ಆಹಾರ ಸೇವನೆ ಅತ್ಯಂತ ಪ್ರಮುಖ ಎಂದು ಬಳ್ಳಿಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ತಿಳಿಸಿದರು.

ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ಪೋಷಣ ಅಭಿಯಾನ ಉದ್ಘಾಟಿಸಿ ಮಾತನಾಡಿ, ಹಿಂದೆ ಆಯಾ ಕಾಲಕ್ಕೆ ಅನುಗುಣವಾಗಿ ಪ್ರಕೃತಿಯಲ್ಲಿ ದೊರೆಯುವ ಎಲ್ಲ ತರಹದ ಹಣ್ಣು, ಸೊಪ್ಪು, ತರಕಾರಿ ಮುಂತಾದವುಗಳನ್ನು ಮನೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿತ್ತು. ಆದರೆ ಈಗ ಮನೆಯಲ್ಲಿ ಮಾಡಿದ ಅಡುಗೆಗಿಂತ ಮಕ್ಕಳು ರಸ್ತೆ ಬದಿ ಸಿಗುವ ತಿಂಡಿಗಳೆಡೆಗೆ ಆಕರ್ಷಿತರಾಗುತ್ತಿರುವುದು ಮತ್ತು ಸೇವಿಸುತ್ತಿರುವುದು ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು.
ಮನೆಯಲ್ಲಿ ಸದಾ ತಾಜಾ ಸೊಪ್ಪು, ತರಕಾರಿ, ಮೊಟ್ಟೆ, ಹಾಲು, ಹಣ್ಣು, ಮೊಳಕೆ ಬರಿಸಿದ ಕಾಳು ಇತ್ಯಾದಿಗಳನ್ನು ಬಳಸುವಂತೆ ನೋಡಿಕೊಳ್ಳಬೇಕು. ಾಸ್ಟ್ ುಡ್‌ನಿಂದ ಸ್ವತಃ ಪಾಲಕರು ದೂರವಿರುವುದರ ಜತೆಗೆ ತಮ್ಮ ಮಕ್ಕಳನ್ನು ಸಾಧ್ಯವಾದಷ್ಟು ದೂರವಿರಿಸಿದಾಗ ಆರೋಗ್ಯದಲ್ಲಿ ಸಮನ್ವಯತೆ ಕಾಯ್ದುಕೊಳ್ಳಬಹುದು ಎಂದರು.
ಮುಖ್ಯಶಿಕ್ಷಕ ಎಸ್.ಡಿ.ಸತೀಶ್‌ಕುಮಾರ್, ಶಿಕ್ಷಕಿ ಸುಜಾತಾ ಹೆಗಡೆ, ಗ್ರಾಮಸ್ಥರಾದ ರಂಜಿತಾ, ಚಂದ್ರಕಾಂತ, ಶಾರದಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net