ಪೌಷ್ಟಿಕ ಆಹಾರದಿಂದ ಉತ್ತಮ ಆರೋಗ್ಯ

22 KAMPLI 07
ಕಂಪ್ಲಿಯಲ್ಲಿ ವೈಷ್ಣವಿ ಮಹಿಳಾ ಜ್ಞಾನವಿಕಾಸ ಕೇಂದ್ರದಿಂದ ಆಯೋಜಿಸಿದ್ದ ಪೌಷ್ಟಿಕ ಆಹಾರ ಮೇಳಕ್ಕೆ ಡಾ.ಶ್ರದ್ಧಾ ಭರತ್ ಚಾಲನೆ ನೀಡಿದರು. ಪ್ರಮುಖರಾದ ರಾಘವೇಂದ್ರ, ಡಾ.ವೆಂಕಟೇಶ, ಜೆ.ಈರಪ್ಪ, ರೇಖಾ, ರೇಣುಕಮ್ಮ ಇತರರಿದ್ದರು.
Published on

ಕಂಪ್ಲಿ: ಪಟ್ಟಣದ ಗಂಗಾನಗರದ ಎಲ್ಲಮ್ಮ ದೇವಸ್ಥಾನ ಸಮುದಾಯ ಭವನದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ವೈಷ್ಣವಿ ಮಹಿಳಾ ಜ್ಞಾನವಿಕಾಸ ಕೇಂದ್ರದಿಂದ ಪೌಷ್ಟಿಕ ಆಹಾರ ಮೇಳ ನಡೆಯಿತು.

ಡಾ.ಶ್ರದ್ಧಾ ಭರತ್ ಮಾತನಾಡಿ, ಸಮತೋಲಿತ ಪೌಷ್ಟಿಕ ಆಹಾರ ಸೇವಿಸಬೇಕು. ಆಹಾರದಲ್ಲಿ ಹಸಿರು ತರಕಾರಿ, ಸೊಪ್ಪು, ಹಣ್ಣುಗಳನ್ನು ಹೆಚ್ಚಾಗಿ ಬಳಸಿದಲ್ಲಿ ರಕ್ತಹೀನತೆ, ಚರ್ಮದ ಸಮಸ್ಯೆಗಳಿಂದ ದೂರವಿರಲು ಸಾಧ್ಯ ಎಂದರು.

ಟ್ರಸ್ಟ್ ಯೋಜನಾಧಿಕಾರಿ ರಾಘವೇಂದ್ರ ಮಾತನಾಡಿ, ಸಂಘದ ಸದಸ್ಯೆಯರು ವೈಯಕ್ತಿಕ ಪ್ರಗತಿಯೊಂದಿಗೆ ಗುಂಪಿನ ಪ್ರಗತಿ ಸಾಧಿಸಬೇಕು. ಸ್ವಾವಲಂಬಿ ಜೀವನ ಸಾಗಿಸಲು ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಪ್ರಮುಖ ಜೆ.ಈರಪ್ಪ, ಡಾ.ವೆಂಕಟೇಶ್ ಸಿ.ಭರಮಕ್ಕನವರ್, ಸಮನ್ವಯಾಧಿಕಾರಿ ರೇಖಾ, ವೈಷ್ಣವಿ ಮಹಿಳಾ ಜ್ಞಾನವಿಕಾಸ ಕೇಂದ್ರ ಅಧ್ಯಕ್ಷೆ ರೇಣುಕಮ್ಮ, ಸೇವಾಪ್ರತಿನಿಧಿ ಗಂಗಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net