

ಕೂಡ್ಲಿಗಿ: ಹಣ್ಣು, ತರಕಾರಿ ಮತ್ತು ಧಾನ್ಯಗಳ ಸೇವನೆಯಿಂದ ಹೃದಯ ಆರೋಗ್ಯವಾಗಿರುತ್ತದೆ ಎಂದು ಡಾ.ಎಸ್.ಪಿ.ಪ್ರದೀಪ ಕುಮಾರ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಿಂದ ಮಂಗಳವಾರ ಏರ್ಪಡಿಸಿದ್ದ ವಿಶ್ವ ಹೃದಯ ದಿನಾಚರಣೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಹೆಚ್ಚು ಪ್ರೋಟೀನ್ ಇರುವಂತಹ ಆಹಾರ ಸೇವಿಸಿಬೇಕು ಜತೆಗೆ ಪ್ರತಿ ನಿತ್ಯ ಕ್ರಮಬ್ಧವಾದ ನಡಿಗೆ ಮಾಡುವ ಮೂಲಕ ಹೃದಯ ಕಾಯಿಲೆ ತಪ್ಪಿಸಬಹುದು ಎಂದು ತಿಳಿಸಿದರು.
ಸಂಸ್ಕರಿಸಿದ ಆಹಾರಗಳು, ಹೆಚ್ಚು ಉಪ್ಪು, ಮತ್ತು ಸಕ್ಕರೆಯುಕ್ತ ತಿಂಡಿಗಳ ಸೇವನೆಯು ಹೃದಯ ಸಂಬಂಧಿ ರೋಗಗಳನ್ನು ಉಂಟುಮಾಡುಇತ್ತದೆ. ವಾಕಿಂಗ್, ಸೈಕ್ಲಿಂಗ್ ಅಥವಾ ಸ್ವಿಮ್ಮಿಂಗ್ ನಂತಹ ದೈಹಿಕ ಚಟುವಟಿಕೆಗಳತ್ತ ಗಮನ ಹರಿಸಬೇಕು. ಸಾಮಾನ್ಯವಾಗಿ ಚಟುವಟಿಕೆಯಿಂದಿರುವ ವ್ಯಕ್ತಿಯ ಹೃದಯದ ಆರೋಗ್ಯಕ್ಕೆ ಅತ್ಯಂತ ಉತ್ತಮವಾಗಿರುತ್ತದೆ ಎಂದರು.
ಪ್ರಮುಖರಾದ ಸೋಮಶೇಖರ, ಜಿಲ್ಲಾ ಮೇಲ್ವಿಚಾರಕ ಹುಲಗಪ್ಪ, ಹಿರಿಯ ಆರೋಗ್ಯ ನಿರಿಕ್ಷಿಣಾಧಿಕಾರಿ ಕೆ. ಜಗದೀಶ, ಪತ್ರಿಗೌಡ ಇತರರಿದ್ದರು.