

ಅಳವಂಡಿ: ಸರ್ಕಾರ 18 ರಿಂದ 35 ವಯಸ್ಸಿನ ಮಹಿಳೆಯರಲ್ಲಿ ಅಪೌಷ್ಟಿಕತೆ ಹೊಗಲಾಡಿಸಲು ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಗುತ್ತಿದೆ. ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಕಾಶಪ್ಪ ಹೇಳಿದರು.
ಇದನ್ನೂ ಓದಿ:ಅಪೌಷ್ಟಿಕತೆ ಹೋಗಲಾಡಿಸಲು ಶ್ರಮಿಸಿ
ಸಮೀಪದ ಕೆಸಲಾಪೂರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ-ಮಕ್ಕಳ ಇಲಾಖೆ ಹಾಗೂ ಕವಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಬುಧವಾರ ಪೌಷ್ಟಿಕ ಆಹಾರ ಕಿಟ್ ವಿತರಿಸಿ ಮಾತನಾಡಿದರು. ಆರೋಗ್ಯಕರ ಜೀವನಕ್ಕೆ ಪೌಷ್ಟಿಕ ಆಹಾರ ಸೇವನೆ ಅಗತ್ಯ. ಮೊಳಕೆಕಾಳು, ತರಕಾರಿ, ಸೊಪ್ಪು ಹಾಗೂ ಋತುಮಾನಕ್ಕೆ ತಕ್ಕಂತೆ ಸಿಗುವ ಹಣ್ಣುಗಳನ್ನು ಸೇವಿಸಬೇಕು. ಅಂಗನವಾಡಿ ಕಾರ್ಯಕರ್ತೆ ಕೊಟ್ರಮ್ಮ, ಆಶಾ ಕಾರ್ಯಕರ್ತೆ ಶಾಂತಲಿಂಗಮ್ಮ ಇತರರಿದ್ದರು.