ಆರ್ಥಿಕವಾಗಿ ಹಿಂದುಳಿದವರಿಗೆ ಉತ್ತಮ ಚಿಕಿತ್ಸೆ : ಪ್ರಶಾಂತ್ ಬಾಳಿಗ ಹೇಳಿಕೆ

New Project (34)
Published on

ಕಿನ್ನಿಗೋಳಿ: ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಎಂ.ಆರ್.ಪಿ.ಎಲ್ ಸಂಸ್ಥೆ ಸಾಕಷ್ಟು ಕೊಡುಗೆ ನೀಡಿದೆ. ಕರೋನಾ ಸಂದರ್ಭ ಆಕ್ಸಿಜನ್ ಕೊರತೆ ಇದ್ದಾಗ ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಸಂಸ್ಥೆ ಮಾಡಿದೆ. ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯಬೇಕು ಎಂಬ ದೃಷಿಯಿಂದ ಪ್ರತಿವರ್ಷ ಸಂಸ್ಥೆ ವತಿಯಿಂದ ಸಹಕಾರ ನೀಡುತ್ತಿದೆದ್ದೇವೆ ಎಂದು ಎಂ.ಆರ್.ಪಿ.ಎಲ್ ಜನರಲ್ ಮ್ಯಾನೇಜರ್ ಪ್ರಶಾಂತ್ ಬಾಳಿಗ ಹೇಳಿದರು.

ಮಂಗಳೂರಿನ ವೆನ್ಲಾಕ್ ಸರ್ಕಾರಿ ಅಸ್ಪತ್ರೆಯಲ್ಲಿ ತಲಸ್ಸೆಮಿಯಾ ರೋಗದಿಂದ ದಾಖಲಾದ ರೋಗಿಗಳಿಗೆ ನ್ಯೂಟ್ರಿಷಿಯನ್ ಬಾರ್ ನೀಡಿ ಮಾತನಾಡಿದರು.

ಸುಮಾರು 100 ರೋಗಿಗಳಿಗೆ ನ್ಯೂಟ್ರಿಷಿಯನ್ ಬಾರ್ ನೀಡಲಾಯಿತು. ಎಂ.ಆರ್.ಪಿ.ಎಲ್ ಕೇಶವ ಪಾಟಾಳಿ, ವೆನ್ಲಾಕ್ ಆಸ್ಪತ್ರೆ ಜಿಲ್ಲಾ ಸರ್ಜನ್ ಸುಪರಿಟೆಂಡೆಂಟ್ ಶಿವಪ್ರಕಾಶ್, ಆರ್.ಎಂ.ಒ ಡಾ.ಸುಧಾಕರ್, ಸಂಯೋಜಕ ಡಾ.ಶರತ್ ಕುಮಾರ್ ಉಪಸ್ಥಿತರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net