ಪೋಷಣ ಅಭಿಯಾನ: ಮಕ್ಕಳ ಭವಿಷ್ಯದ ಆರೋಗ್ಯದ ಶಕ್ತಿ

Screenshot_2025-09-23-20-43-43-37.jpg
Published on

ಧಾರವಾಡ: ಪೋಷಣ ಅಭಿಯಾನವು ಮಕ್ಕಳ ಭವಿಷ್ಯವನ್ನು ಬದಲಾಯಿಸುವ ಶಕ್ತಿಯುತ ಕಾರ್ಯಕ್ರಮವಾಗಿದೆ. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿ ಒಟ್ಟಾಗಿ ಪೋಷಣ ಕಾರ್ಯದಲ್ಲಿ ನಿರಂತರ ಶ್ರಮಿಸುತ್ತಿದ್ದಾರೆ. ಇದರಿಂದ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಾಧ್ಯವಾಗುತ್ತದೆ ಎಂದು ಜಿಪಂ ಸಿಇಒ ಭುವನೇಶ ಪಾಟೀಲ ಹೇಳಿದರು.

ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ 8 ನೇ ರಾಷ್ಟ್ರೀಯ ಪೋಷಣ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ವಿಶೇಷವಾಗಿ ಮಕ್ಕಳಿಗೆ ಆದಷ್ಟು ಸಕ್ಕರೆ ಆಹಾರ ಕಡಿಮೆ ಕೊಡಬೇಕು. ಶಿಶುವಿಗೆ ಮೊದಲ ಆರು ತಿಂಗಳು ತಾಯಿ ಹಾಲೇ ಶ್ರೇಷ್ಠ ಆಹಾರ. ಆ ನಂತರ ದ್ರವ ರೂಪದ ಪೌಷ್ಟಿಕ ಆಹಾರವನ್ನು ನೀಡಿದರೆ ಮಕ್ಕಳ ಆರೋಗ್ಯವೂ ಉತ್ತಮವಾಗಿರುತ್ತದೆ. ಹಸಿರು ಸೊಪ್ಪು, ಸಿರಿಧಾನ್ಯ, ಹಣ್ಣುಗಳು ನಮ್ಮ ಮನೆಗಳಲ್ಲಿ ದೊರೆಯುವ ಸರಳ ಪೆÇೀಷಕ ಆಹಾರ. ಇವುಗಳನ್ನು ಮಕ್ಕಳ ದಿನನಿತ್ಯದ ಆಹಾರದಲ್ಲಿ ಸೇರಿಸುವುದರಿಂದ ಪೌಷ್ಠಿಕತೆಯ ಕೊರತೆ ಆಗದಂತೆ ಮಾಡಬಹುದು ಎಂದರು.

ಪೋಷಣ ಅಭಿಯಾನವು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಶೇ.100 ಮಕ್ಕಳಿಗೂ ತಾಯಿ ಹಾಲು. ಶೇ.100 ಗರ್ಭಿಣಿಯರಿಗೂ ಪೌಷ್ಠಿಕಾಹಾರ ದೊರಕಬೇಕು. ಮತ್ತು ಎಲ್ಲರಲ್ಲಿಯೂ ಇದರ ಮಹತ್ಮದ ಅರಿವು ಮೂಡಿಸಬೇಕು ಎಂದರು.

ಸಹಜವಾದ, ಪ್ರಕೃತಿಯ ಆಹಾರ ಸೇವನೆ ಮಾಡುವುದು ಆರೋಗ್ಯಕ್ಕೆ ಆಧಾರ. ಇಂದಿನ ಮಕ್ಕಳಿಗೆ ಸಿರಿಧಾನ್ಯಗಳ ಮಹತ್ವವೇ ತಿಳಿದಿಲ್ಲ. ಸಿರಿಧಾನ್ಯಗಳಲ್ಲಿ ಇರುವ ಪೌಷ್ಟಿಕಾಂಶ, ಶಕ್ತಿಯುತ ಗುಣಗಳನ್ನು ಅವರಿಗೆ ತಿಳಿಸಿಕೊಡುವುದು ನಮ್ಮ ಜವಾಬ್ದಾರಿ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್. ದೊಡ್ಡಮನಿ ಅವರು ಮಾತನಾಡಿ, ಪೆÇೀಷಣೆಯ ಕೊರತೆಯಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ವಿಶೇಷವಾಗಿ ಗರ್ಭಿಣಿಯರು, ಶಿಶುಗಳು ಹಾಗೂ ಕುಮಾರಾಸ್ಥೆಯಲ್ಲಿರುವ ಮಕ್ಕಳಿಗೆ ಸಮತೋಲನ ಆಹಾರ, ಪೋಷಣ ಆಹಾರವು ಅವಶ್ಯವಾಗಿದೆ ಎಂದರು.

ಪ್ರತಿ ಕುಟುಂಬದಲ್ಲಿ ದಿನನಿತ್ಯವೂ ಪೋಷಣದ ಪ್ರಗತಿ ನಡೆಯಬೇಕು. ನಮ್ಮ ಹಿರಿಯರೆಲ್ಲರೂ ಆರೋಗ್ಯದಿಂದ ಇದ್ದದ್ದು, ಅವರು ಸೇವಿಸಿದ ಆಹಾರದಿಂದ ಮತ್ತು ಆಹಾರ ಸೇವನೆ ಕ್ರಮ ಸರಳವಾಗಿದ್ದು, ಕಾಲಮಾನಕ್ಕೆ ತಕ್ಕಂತೆ ಆಹಾರ ಸೇವಿಸುತ್ತಿದ್ದರು. ಆದ್ದರಿಂದ ಮಕ್ಕಳಿಗೂ ಸಮಯೋಚಿತ, ಸರಿಯಾದ ಆಹಾರ ಪದ್ಧತಿ ಬೆಳೆಸುವುದು ಅತ್ಯಂತ ಅವಶ್ಯಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳು ಶಿಶುಗಳಿಗೆ ಅನ್ನಪ್ರಾಶನ ಮಾಡಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ. ಎಚ್.ಎಚ್.ಕುಕನೂರ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಗೂ ಸುನಿತಾ ನಾಡಿಗೇರ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net