ತುಮಕೂರು ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಮರಗಳ ಪೋಷಣೆಗೆ ನಿಂತ ಸಿದ್ದಲಿಂಗಯ್ಯ

tree plant
Published on

ತುಮಕೂರು: ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಶಿಕ್ಷಕರೊಬ್ಬರು 15 ವರ್ಷಗಳಿಂದ 20ಕ್ಕೂ ಹೆಚ್ಚು ಮರಗಳನ್ನ ನೆಟ್ಟು ಪೋಷಿಸಿ, ನೆರಳಿನ ವ್ಯವಸ್ಥೆ ಮಾಡಿ, ಪರಿಸರ ಕಾಳಜಿ ಮೆರೆದಿದ್ದಾರೆ.

ನಗರದ ಕೆ.ಆರ್.ಬಡಾವಣೆ ನಿವಾಸಿ, ನಿವೃತ್ತ ಶಿಕ್ಷಕ ಸಿದ್ದಲಿಂಗಯ್ಯ ಅವರು ಮೈದಾನದಲ್ಲಿ ಸಸಿಗಳನ್ನ ನೆಟ್ಟು ಇಂದಿಗೂ ಪೋಷಿಸುತ್ತಿದ್ದಾರೆ.

15 ವರ್ಷದ ಹಿಂದೆ ಅಮೆರಿಕಾಗೆ ಪ್ರವಾಸಕ್ಕೆ ತೆರಳಿದ್ದ ಸಿದ್ದಲಿಂಗಯ್ಯ ಅಲ್ಲಿ ವೃದ್ಧರು ಹವ್ಯಾಸವೆಂಬಂತೆ ಮರ ಬೆಳೆಸುತ್ತಿದ್ದನ್ನು ನೋಡಿ ಸ್ಪೂರ್ತಿಗೊಂಡು ವಾಪಸಾದ ಬಳಿಕ ಇಲ್ಲಿ ಸಸಿ ನೆಡಲು ಶುರು ಮಾಡಿದ್ದರು. ಪ್ರಸ್ತುತ ಕಾಲೇಜು ಮೈದಾನದಲ್ಲಿ ಸಮೃದ್ಧವಾಗಿ 10ಕ್ಕೂ ಹೆಚ್ಚು ಅರಳೀಮರ ಹಾಗೂ ಬೇವು, ನೇರಳೆ ಸೇರಿ ವಿವಿಧ ಬಗೆಯ ಸಸಿ ನೆಟ್ಟು ತಮ್ಮ 81 ವಯಸ್ಸಿನಲ್ಲಿಯೇ ಉತ್ಯಂತ ಉತ್ಸಾಹದಿಂದ ಮರಗಳ ರಕ್ಷಣೆ ಮಾಡುತ್ತಿದ್ದಾರೆ. ಪ್ರಸ್ತುತ 200ಕ್ಕೂ ಹೆಚ್ಚಿರುವ ಮರಗಳಿಗೆ ಯಾವುದೇ ತೊಂದರೆಯಾಗದಂತೆ ನಿತ್ಯವೂ ಪೋಷಣೆ ಮಾಡುತ್ತಿದ್ದಾರೆ.

ರಸ್ತೆಯ ಬದಿಯಲ್ಲಿ ಬೆಳೆದು ಪೋಷಣೆಯಿಲ್ಲದೆ ಒಣಗುವ ಸಣ್ಣಸಣ್ಣ ಸಸಿ ತಂದು ಅವುಗಳಿಗೆ ಪಾಟ್ ನಿರ್ಮಿಸಿ ಅವುಗಳನ್ನ ಮನೆಯ ಆವರಣದಲ್ಲೇ ಚಿಕ್ಕ ನರ್ಸರಿ ನಿರ್ಮಿಸಿ ಪೋಷಿಸಿ ನಂತರ ಮಳೆಗಾಲದಲ್ಲಿ ನೆಡುವ ಕಾರ್ಯ ಮಾಡುತ್ತಿದ್ದಾರೆ. ಸಣ್ಣ ಸಣ್ಣ ಸಸಿಗಳಿಗೆ ಕಬ್ಬಿಣದ ಜಾಲರಿಯನ್ನೂ ತಮ್ಮ ಸ್ವಂತ ಖರ್ಚಿನಿಂದಲೇ ಭರಿಸಿ ಸಸಿ ಸುತ್ತಲೂ ಹಾಕಿಸಿ ಗಿಡಗಳಿಗೆ ಪ್ರಾಣಿಗಳಿಂದ ಆಗುವ ಅಪಾಯ ತಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net