ದಾದಿಯರು ರೋಗಿಗಳಿಗೆ ಮಾತೆ ಸ್ವರೂಪ

5Huk2
Published on

ಹುಕ್ಕೇರಿ: ಸಾರ್ವಜನಿಕರು ವೈದ್ಯರನ್ನು ಭಗವಂತನ ರೂಪದಲ್ಲಿ ಕಾಣುತ್ತಾರೆ. ತಾಯಿಯಂತೆ ರೋಗಿಗಳ ಸೇವೆ ಮಾಡುವ ದಾದಿಯರನ್ನು ಮಾತೆಯರಂತೆ ಗೌರವಿಸುತ್ತಾರೆ ಎಂದು ತಾಲೂಕು ವೈದ್ಯಾಧಿಕಾರಿ ಉದಯ ಕುಡಚಿ ಹೇಳಿದರು.

ತಾಲೂಕಿನ ಬೆಲ್ಲದ ಬಾಗೇವಾಡಿಯ ರಾಜೇಶ್ವರಿ ವಿ. ಕತ್ತಿ ಕಾಲೇಜ್ ಆ್ ನರ್ಸಿಂಗ್ ಸೈನ್ಸ್ ಮೂರನೇ ಬ್ಯಾಚ್‌ನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ಜ್ಯೋತಿ ಪ್ರಜ್ವಲನೆ ಹಾಗೂ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಈಚೆಗೆ ಮಾತನಾಡಿದರು.

ವೈದ್ಯರು ಚಿಕಿತ್ಸೆ ನೀಡಿದರೆ ದಾದಿಯರು ರೋಗಿಗಳು ಗುಣಮುಖರಾಗುವವರೆಗೆ ನಿಸ್ವಾರ್ಥ ಸೇವೆ ಮಾಡುತ್ತಾರೆ. ಆದ್ದರಿಂದ ನರ್ಸಿಂಗ್ ವೃತ್ತಿಯನ್ನು ಸಮಾಜ ಗೌರವಿಸುತ್ತದೆ ಎಂದರು.

ಚಿಕ್ಕೋಡಿ ದಿಯಾ ಆಸ್ಪತ್ರೆಯ ಡಾ. ಪವನ ದಿವಾನ ಮಾತನಾಡಿ, ನರ್ಸಿಂಗ್ ವಿದ್ಯಾರ್ಥಿಗಳು ನೈತಿಕ ಶಿಕ್ಷಣದ ಮಹತ್ವ ಮತ್ತು ಉತ್ತಮ ಜೀವನ ಶೈಲಿ ಅರಿತಿರಬೇಕು ಎಂದರು.

ಅವಜೀಕರ ಆಶ್ರಮದ ಅಭಿನವ ಮಂಜುನಾಥ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಪ್ರಾಂಶುಪಾಲ ವಿಠ್ಠಲ ಕಮತಿ ಶೈಕ್ಷಣಿಕ ಪ್ರಗತಿ ವಿವರಿಸಿದರು. ಹುಕ್ಕೇರಿ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಎಂ.ಎಂ.ನರಸನ್ನವರ, ಸಂಸ್ಥೆಯ ಆಡಳಿತಾಧಿಕಾರಿ ಕೆ.ಸಿ.ಮುಚ್ಕಂಡಿ, ಎಸ್.ಎಂ. ಬಂಗಿ, ವಿ.ಡಿ. ತೋರೋ, ಎಸ್.ಡಿ. ಬೆಳ್ಳಿಕಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net