

ಚಾಮರಾಜನಗರ: ಜಮೀನಿನ ಮೇಲೆ ಹಾದು ಹೋಗಿದ್ದ ವಿದ್ಯುತ್ ಮಾರ್ಗದಲ್ಲಿ ಶರ್ಟ್ ಸರ್ಕ್ಯೂಟ್ ಸಂಭವಿಸಿದ ಬಿದ್ದ ಬೆಂಕಿಯಿಂದ ಶನಿವಾರ ನರ್ಸರಿ ಸಾಮಗ್ರಿ ಭಸ್ಮವಾಗಿದೆ.
ತಾಲೂಕಿನ ವಡ್ಡರಹಳ್ಳಿ ಗ್ರಾಮದ ಶಿವಮೂರ್ತಿ ಅವರ ಜಮೀನಿನಲ್ಲಿ ನಿರ್ಮಿಸಿದ್ದ ಐಟೆಕ್ ನರ್ಸರಿಗೆ ವಿದ್ಯುತ್ ಶರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿ ಕಿಡಿಯಿಂದ ಇಡೀ ನರ್ಸರಿಗೆ ಅಳವಡಿಸಿದ್ದ ಪ್ಲಾಸಿಕ್ ಕವರ್‌ಗೆ ಜ್ವಾಲೆ ವ್ಯಾಪಿಸಿದೆ. ಪರಿಣಮ ಒಳಗೆಡೆ ಇದ್ದ 5 ಸಾವಿರ ಲೀ. ಸಾಮರ್ಥ್ಯದ 2 ನೀರಿನ ಟ್ಯಾಂಕ್, 10 ಲಕ್ಷಕ್ಕೂ ಹೆಚ್ಚಿನ ಟೊಮೋಟೋ, ಮೆನಸಿನ ಕಾಯಿ, ಕೋಸು ಪೈರುಗಳು, ಫಾಲಿಥಿನ್ ಕವರ್, ಇತರೇ ನರ್ಸರಿ ಸಾಮಗ್ರಿ ಸುಟ್ಟು ಹೋಗಿದೆ.
ಜಿಲ್ಲಾಡಳಿತ, ಸೆಸ್ಕ್ ಹಾಗೂ ತೋಟಗಾರಿಕೆಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕು ಎಂದು ಸಂತ್ರಸ್ತರು ಒತ್ತಾಯಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.