ಕೃಷಿಗೆ ಉತ್ತೇಜನ ನೀಡಲಿವೆ ನರ್ಸರಿಗಳು

IMG-20250303-WA0265
ಅರಸೀಕೆರೆ ತಾಲೂಕಿನ ಕಸಬಾ ಹೋಬಳಿಯ ಬೋರಾನ್ ಕೊಪ್ಪಲು ಬಳಿ ಶ್ರೀ ಸಿದ್ದೇಶ್ವರ ಹೈಟೇಕ್ ನರ್ಸರಿಯನ್ನು ಶಾಸಕ ಶಿವಲಿಂಗೇಗೌಡ ಉದ್ಘಾಟಿಸಿದರು. ರವಿ ನಾಯ್ಕ, ಸಂಪತ್ ನಾಯ್ಕ, ಮೋಹನ್ ನಾಯ್ಕ, ಸಲ್ಮಾನ್,ಪ್ರಭು, ಮಹಾಲಿಂಗಪ್ಪ ಶಿವಲಿಂಗಪ್ಪ ಇತರರು ಹಾಜರಿದ್ದರು.
Published on

ಅರಸೀಕೆರೆ ಗ್ರಾಮಾಂತರ:  ಮುಂಗಾರು ಮತ್ತು ಹಿಂಗಾರು ಮಳೆ ಕಾಲಕ್ಕೆ ತಕ್ಕನಾಗಿ ಆಗಮಿಸದಿದ್ದರೆ ನರ್ಸರಿಗಳ ಮೂಲಕ ಪೋಷಿಸಲಾದ ಗಿಡಗಳು ಇನ್ನಿತರ ಉಪ ಕೃಷಿ ಬೆಳೆಯಾಗಿ ರೈತರಿಗೆ ಸಹಾಯವಾಗಲಿದೆ ಎಂದು ಕರ್ನಾಟಕ ಗೃಹಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಮುದ್ದನಹಳ್ಳಿ ಗ್ರಾಮದ ಕೃಷಿ ಸಾಧಕರಾದ ಉಮೇಶ್ ನಾಯ್ಕ ಹಾಸನ ರಸ್ತೆಯ ಬೋರನ ಕೊಪ್ಪಲು ಗೇಟ್ ಹತ್ತಿರ ಅಭಿವೃದ್ಧಿಪಡಿಸಿರುವ ಶ್ರೀ ಸಿದ್ದೇಶ್ವರ ಹೈಟೆಕ್ ನರ್ಸರಿ ಘಟಕವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಪ್ರಸ್ತುತ ದಿನಗಳಲ್ಲಿ ಹೊಸ ಹೊಸ ಅವಿಷ್ಕಾರಗಳು ನಡೆಯುತ್ತಿವೆ. ಅಂತಹ ಅವಿಷ್ಕಾರಗಳಲ್ಲಿ ಗಿಡಗಳನ್ನು ಪೋಷಿಸಿ ಬೆಳಸುವ ನರ್ಸರಿಗಳು ಕೂಡ ಒಂದಾಗಿದೆ. ವಿವಿಧ ಹಣ್ಣಿನ ಗಿಡಗಳನ್ನು ಬೆಳೆಸುವ ಜತೆಯಲ್ಲಿ ಆರೋಗ್ಯಕರ ಪ್ರಕೃತ್ತಿ ದತ್ತವಾದ ಕೀಟನಾಶಕಗಳನ್ನು ಬೆಳೆಸಲು ಮುಂದಾಗಬೇಕು. ಹುಳು , ಹುಪ್ಪಟೆ, ಕೀಟಗಳನ್ನು ನಾಶಪಡಿಸಲು ಕೀಟನಾಶಕಗಳನ್ನು ಉಪಯೋಗಿಸುವ ಜತೆಯಲ್ಲಿ ಭೂಮಿ ಫಲವತ್ತತೆ ಕಾಪಾಡಿಕೊಳ್ಳುವ ಬಗ್ಗೆಯೂ ಕೃಷಿಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಮಾತನಾಡಿ, ಮಳೆ ಆಧಾರಿತ ಕೃಷಿ ಚಟುವಟಿಕೆಗಳ ಪ್ರದೇಶ ನಮ್ಮದಾಗಿದೆ. ಈ ಪ್ರದೇಶಕ್ಕೆ ಭಗೀರಥರಾಗಿರುವ ಶಾಸಕ ಕೆ.ಎಂ.ಶಿವಲಿಂಗೇಗೌಡರ ಪ್ರಯತ್ನದಿಂದ ಎತ್ತಿನಹೊಳೆಯಂತಹ ಯೋಜನೆಗಳಿಂದ ಕೆರೆ-ಕಟ್ಟೆಗಳು ನೀರಿನಿಂದ ತುಂಬುವ ದಿನಗಳು ದೂರವಿಲ್ಲ. ಆ ದಿನಗಳು ಶೀಘ್ರದಲ್ಲೇ ಬರಲಿದ್ದು, ನೀರಾವರಿ ಪ್ರದೇಶವಾಗಿ ರೂಪುಗೊಳ್ಳುವ ಮೂಲಕ ವರ್ಷಪೂರ್ತಿ ಕೃಷಿ ಚಟುಚಟಿಕೆ ಮತ್ತು ಉತ್ಪನ್ನಗಳಿಗೂ ಶಕ್ತಿ ಸಿಗಲಿದೆ. ನರ್ಸರಿ ಘಟಕ ಪೋಷಣೆ ಮಕ್ಕಳನ್ನು ಪೋಷಿಸುವಂತೆ ಜಾಗ್ರತೆಯಾಗಿ ಪೋಷಿಸಬೇಕು. ಅಂತಹ ಪ್ರಯತ್ನಗಳ ಮೂಲಕ ಸಾಧಕರಾದ ಉಮೇಶ್ ನಾಯಕ್ ಪ್ರಯತ್ನಪಟ್ಟಿದ್ದಾರೆ. ಅವರ ಪ್ರಯತ್ನಕ್ಕೆ ಫಲ ಸಿಗಲಿ ಎಂದರು.

ಶಾಸಕ ಕೆ.ಎಂ.ಶಿವಲಿಂಗೇಗೌಡರ 17 ವರ್ಷಗಳ ಅಭಿವೃದ್ಧಿ ಕೆಲಸಗಳನ್ನು ಅಂಕಿ ಅಂಶಗಳಲ್ಲಿ ನಮೂದಾಗಿರುವ ವಿಶೇಷ ಸ್ಮರಣಾ ಫಲಕ ಬಿಡುಗಡೆ ಮಾಡಲಾಯಿತು.

ಮುದ್ದನಹಳ್ಳಿ ಗ್ರಾ.ಪಂ. ಮಾಜಿ ಸದಸ್ಯ ರವಿನಾಯ್ಕ, ಸಂಪತ್ ನಾಯ್ಕ, ಮೋಹನ್ ನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್ ನಾಯ್ಕ, ಚಂದ್ರ ನಾಯ್ಕ, ಸಲ್ಮಾನ್, ನಾಗೇನಹಳ್ಳಿ ಗ್ರಾ.ಪಂ ಸದಸ್ಯ ಪ್ರಭನಾಯ್ಕ, ರೈತ ಸಂಘದ ಮುಖಂಡರಾದ ಮಹಾಲಿಂಗಪ್ಪ, ಶಿವಲಿಂಗಪ್ಪ, ಮುದುಡಿ ಗ್ರಾ.ಪಂ ಸದಸ್ಯ ಮೋಹನ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net