ಮಹಿಳಾ ಸಹೋದ್ಯೋಗಿಗಳ ಅಶ್ಲೀಲ ದೃಶ್ಯವನ್ನು ತನ್ನ ಪ್ರಿಯಕರನಿಗೆ ಕಳುಹಿಸುತ್ತಿದ್ದ ಪ್ರೇಯಸಿ! ಮುಂದೇನಾಯ್ತು?

obscene-visuals-arrest
Published on

ಬೆಂಗಳೂರು: ಹಾಸ್ಟೆಲ್​ನಲ್ಲಿ ಮಹಿಳಾ ಸಹೋದ್ಯೋಗಿಗಳ ಸ್ನಾನದ ದೃಶ್ಯಾವಳಿಯನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯುತ್ತಿದ್ದ ಯುವತಿ, ತನ್ನ ಪ್ರಿಕರನಿಗೆ ಕಳುಹಿಸುತ್ತಿದ್ದಳು. ಕೊನೆಗೂ ರೆಡ್​ಹ್ಯಾಂಡ್​ ಆಗಿ ಸಿಕ್ಕಿ ಆಕೆ ಸಿಕ್ಕಿಬಿದ್ದಿದ್ದು, ವಾಟ್ಸ್​ಆ್ಯಪ್​ ಮೂಲಕ ಪ್ರೇಯಸಿ ಕಳುಹಿಸುತ್ತಿದ್ದ ಸಹೋದ್ಯೋಗಿಗಳ ಅಶ್ಲೀಲ ದೃಶ್ಯವನ್ನು ಆಕೆಯ ಪ್ರಿಯಕರ ಏನು ಮಾಡುತ್ತಿದ್ದ ಎಂಬುದು ಬಯಲಾಗಿದೆ.

ವೈಟ್​ಫೀಲ್ಡ್​ನ ಖಾಸಗಿ ಆಸ್ಪತ್ರೆಯಲ್ಲಿ ಅಶ್ವಿನಿ ನರ್ಸ್​ ಆಗಿ ಕೆಲಸ ಮಾಡುತ್ತಿದ್ದಳು. ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಸೇವೆ ಸಲ್ಲಿಸುವ ನರ್ಸ್​ಗಳಿಗೆ ಹಾಸ್ಟೆಲ್​ ಸೌಲಭ್ಯ ಒದಗಿಸಲಾಗಿತ್ತು. ಅದರಲ್ಲಿ ಅಶ್ವಿನಿ ಸೇರಿದಂತೆ ಹಲವಾರು ನರ್ಸ್​ಗಳು ನೆಲೆಸಿದ್ದರು. ಡಿ.5ರ ಸಂಜೆ 6.45ರಲ್ಲಿ ನರ್ಸ್​ವೊಬ್ಬರು​ ಸ್ನಾನ ಮಾಡಲು ಶೌಚಗೃಹಕ್ಕೆ ಹೋಗಿದ್ದರು. ಆ ವೇಳೆ ಅಶ್ವಿನಿ ಬಚ್ಚಿಟ್ಟ ಮೊಬೈಲ್​ ಕಣ್ಣಿಗೆ ಬಿದ್ದಿತ್ತು.

ಬರಿಗೊಂಡ ಆ ನರ್ಸ್​, ಮೊಬೈಲ್​ ತೆಗೆದುಕೊಂಡು ಪರಿಶೀಲನೆ ನಡೆಸಿದಾಗ ವಿಡಿಯೋ ರೆಕಾರ್ಡ್​ ಆನ್​ ಆಗಿರುವುದು ಕಂಡುಬಂದಿತ್ತು.

ಗಾಬರಿಗೊಂಡ ಸಂತ್ರಸ್ತ ನರ್ಸ್​, ಮೊಬೈಲ್​ನಲ್ಲಿನ ಫೋಟೋ ಗ್ಯಾಲರಿಯನ್ನು ಪರಿಶೀಲನೆ ನಡೆಸಿದಾಗ ಹಲವು ಆಸ್ಪತ್ರೆಯ ಮಹಿಳಾ ಸಿಬ್ಬಂದಿಗಳ ಸ್ನಾನದ ದೃಶ್ಯಾವಳಿ ಅದರಲ್ಲಿತ್ತು. ಹಾಸ್ಟೆಲ್​ ಮೇಲ್ವಿಚಾರಕಿ ಕೊಟ್ಟ ದೂರಿನ ಮೇರೆಗೆ ನರ್ಸ್​ ಅಶ್ವಿನಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಶ್ಲೀಲ ವಿಡಿಯೋಗಳನ್ನು ಪ್ರಿಯಕರನಿಗೆ ಕಳುಹಿಸುತ್ತಿದ್ದಾಗಿ ಹೇಳಿಕೆ ನೀಡಿದ್ದಳು.

ಅಶ್ವಿನಿ ಹೇಳಿಕೆ ಮೇರೆಗೆ ಆಕೆಯ ಪ್ರಿಯಕರ ಪ್ರಭು (31) ಎಂಬಾತನನ್ನು ವೈಟ್​ಫೀಲ್ಡ್​ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಚೆನ್ನೈನ ಪ್ರತಿಷ್ಠಿತ ಹೋಟೆಲ್​ನ ಬಾಣಸಿಗನಾಗಿದ್ದ ಪ್ರಭುನನ್ನು ಬೆಂಗಳೂರಿಗೆ ಕರೆ ತರಲಾಗಿದೆ.

ವಾಟ್ಸ್​ಆ್ಯಪ್​ನಲ್ಲಿ ನರ್ಸ್​ ಅಶ್ವಿನಿ ಕಳುಹಿಸುತ್ತಿದ್ದ ಅಶ್ಲೀಲ ವಿಡಿಯೋಗಳನ್ನು ನೋಡಿ ಆನಂತರ ಡಿಲೀಟ್​ ಮಾಡುತ್ತಿದ್ದಾಗಿ ಆರೋಪಿ ಹೇಳುತ್ತಿದ್ದಾನೆ. ಮೊಬೈಲ್​ ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net