ಕಲಿಕೆ ಬಲವರ್ಧನೆಗೆ ಸಂಖ್ಯಾಜ್ಞಾನದ ಚಟುವಟಿಕೆ ಸಹಕಾರಿ

UPBR KALIKA HABBA
Published on

ಉಪ್ಪಿನಬೆಟಗೇರಿ: ಮೂಲಭೂತ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನದ ಚಟುವಟಿಕೆಗಳಿಂದ ಕಲಿಕೆ ಬಲವರ್ಧನೆಯಾಗುತ್ತದೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಸ್.ವಿ. ಸಂತಿ ಹೇಳಿದರು.

ಧಾರವಾಡ ತಾಲೂಕಿನ ಮರೇವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಮ್ಮಿನಬಾವಿ ಕ್ಲಸ್ಟರ್ ಮಟ್ಟದ ಎಫ್.ಎಲ್.ಎನ್ ಆಧಾರಿತ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಕಲಿತ ಪಾಠಗಳನ್ನು ವಿಭಿನ್ನತೆಯೊಂದಿಗೆ ಸ್ಪರ್ಧಾತ್ಮಕ ಚಟುವಟಿಕೆ ಮೂಲಕ ತೆರೆದಿಟ್ಟಾಗ ಮಾತ್ರ ಕಲಿಕೆ ಹಬ್ಬವಾಗುತ್ತದೆ ಎಂದರು.

ಅಮ್ಮಿನಬಾವಿ ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿ ಬಸವರಾಜ ಕುರಗುಂದ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲ ಉಮಾಕಾಂತ ಕರ್ಚಕಟ್ಟಿ ಮಾತನಾಡಿದರು.

ಪಿಡಿಒ ಮಲ್ಲಿಕಾರ್ಜುನ ಕೋಯಪ್ಪನವರ, ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷೆ ನೀಲವ್ವ ವಗ್ಗರ, ಎಸ್​ಡಿಎಂಸಿ ಅಧ್ಯಕ್ಷ ಉಮೇಶ ಹುಲಮನಿ, ಮಂಜಪ್ಪ ಪೂಜಾರ, ಅಜಿತಕುಮಾರ ದೇಸಾಯಿ, ಎಲ್.ಎಸ್. ಬಾಗಲಕೋಟ, ಎಸ್.ಆರ್. ಕೋರೆಪ್ಪನವರ, ಅಕ್ಷತಾರಾಣಿ ಹೊಂಗಲ, ಉದಯ ಮೊರಬ, ಶಿವಾನಂದ ಹೂಗಾರ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net