ಪುತ್ತೂರಿನಲ್ಲಿ ನಂಬರ್ ಪ್ಲೇಟ್ ಕೆ.ಎ.06. ಡಿ.5144 ಚಿತ್ರ ತಂಡ

IMG-20230911-WA0012
Published on

ಪುತ್ತೂರು: ಸ್ನೇಹಿತನ ವಿವಾಹಕ್ಕೆ ಹೊರಟ ತಂಡವೊಂದು ಕಾಡಿನ ಮಧ್ಯದಲ್ಲಿ ಸಿಲುಕಿಕೊಂಡ ಕಥಾ ವಸ್ತುವನ್ನಿಟ್ಟುಕೊಂಡು ಹಾರರ್ ಹಾಗೂ ತ್ರಿಲ್ಲರ್ ಆಗಿರುವ ನಂಬರ್ ಪ್ಲೇಟ್ ಕೆ.ಎ.06. ಡಿ.5144 ಸಿನೆಮಾ ಮಾಡುತ್ತಿದ್ದೇವೆ. ಚಿತ್ರೀಕರಣ ಎರಡು ಹಂತದಲ್ಲಿ ಸುಮಾರು 30 ದಿನಗಳ ಕಾಲ ನಡೆಯಲಿದ್ದು, ಲೋ ಬಜೆಟ್ ಚಿತ್ರವಾಗಿರಲಿದೆ ಎಂದು ಚಿತ್ರ ನಿರ್ದೇಶಕ ಗಂಗರಾಜ್ ಪಿ. ಆರ್. ಹೇಳಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸೋಮವಾರ ನಡೆದಿದ್ದು, ಮೊದಲ ಹಂತದ ಚಿತ್ರೀಕರಣ ಪುತ್ತೂರು ನಗರ ಸೇರಿ ಗ್ರಾಮೀಣ ಭಾಗದಲ್ಲಿ ನಡೆಯಲಿದೆ. ಎರಡನೇ ಹಂತದಲ್ಲಿ ಬೆಂಗಳೂರು ಹಾಗು ತುಮಕೂರು ಭಾಗದಲ್ಲಿ ನಡೆಸಲಿದ್ದೇವೆ. ನಾಯಕನಾಗಿ 3 ಚಿತ್ರಗಳನ್ನು ಮಾಡಿದ ಆರ್ಯನ್, ನಾಯಕಿಯಾಗಿ ಆಲ್ಬಮ್ ಗಳಲ್ಲಿ ಅಭಿನಯಿಸಿದ ಅನುಭವವಿರುವ ಕೀರ್ತಿ ಗೌಡ, ಕಳನಾಯಕನಾಗಿ ವಿಜಯಸೂರ್ಯ ನಟಿಸಲಿದ್ದಾರೆ. ಛಾಯಾಗ್ರಹಣವನ್ನು ರವಿರಾಮ ದುರ್ಗಾ ನಡೆಸಲಿದ್ದು, ಹಾಡುಗಳನ್ನು ತುಮಕೂರು ಶ್ರೀಧರ್ ಬರೆದಿದ್ದಾರೆ ಎಂದು ಸೋಮವಾರ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.

ಶ್ರೀ ವೇಘವರ್ಣ ಮೂವೀಸ್ ಪ್ರೆಂಡ್ಸ್ ಅರ್ಪಿಸುವ ಡ್ರೀಮ್ ಕ್ಯಾಚರ್ಸ್ ಪುತ್ತೂರು ಇದಕ್ಕೆ ಸಹಯೋಗವನ್ನು ನೀಡಲಿದೆ. ಚಿತ್ರದಲ್ಲಿ ನಾಲ್ಕು ಹಾಡು ಹಾಗೂ ನಾಲ್ಕು ಪೈಟಿಂಗ್ ಇರಲಿದ್ದು, ಕಾಮಿಡಿ ಕಿಲಾಡಿ ಜಗ್ಗಣ್ಣ, ಕಾಂತಾರ ಹಾಗೂ ವಿಕ್ರಾಂತ್ ರೋಣದಲ್ಲಿ ವಿವಿಧ ಪಾತ್ರ ನಿರ್ವಹಿಸಿದವರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕುಟುಂಬ ಸಹಿತವಾಗಿ ನೋಡಬಹುದಾದ ಚಿತ್ರ ಇದಾಗಿದ್ದು, ಜನವರಿಯಿಂದ ಮಾರ್ಚ್ ಒಳಗೆ ರಾಜ್ಯಾಂದ್ಯಂತ ತೆರೆಗೆ ತರುವ ಪ್ರಯತ್ನದಲ್ಲಿದ್ದೇವೆ ಎಂದು ತಿಳಿಸಿದರು.

ನಾಯಕ ನಟ ಆರ್ಯನ್, ನಾಯಕಿ ಕೀರ್ತಿಗೌಡ, ಕಳನಾಯಕ ವಿಜಯಸೂರ್ಯ, ಛಾಯಾಗ್ರಾಹಕ ರವಿರಾಮ ದುರ್ಗಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net