

ರಾಮ ಕಿಶನ್ ಕೆ.ವಿ.
ಬೆಂಗಳೂರು: ರಾಜಧಾನಿ ಜನರ ಸಂಚಾರಸ್ನೇಹಿ ವ್ಯವಸ್ಥೆಯಾಗಿರುವ ನಮ್ಮ ಮೆಟ್ರೋ ಇತ್ತೀಚೆಗೆ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಮೆಟ್ರೋ ನಿಲ್ದಾಣ 'ಆತ್ಮಹತ್ಯೆ ಸ್ಪಾಟ್' ಆಗಿ ಬದಲಾಗುತ್ತಿದೆಯೇ ಎಂಬ ಆತಂಕ ಪ್ರಜ್ಞಾವಂತರಲ್ಲಿ ಕಾಡಲಾರಂಭಿಸಿದೆ. ಮೆಟ್ರೋ ಹಳಿಗೆ ಧುಮುಕಿ ಪ್ರಸಕ್ತ ವರ್ಷ ಇಬ್ಬರು ಸಾವನ್ನಪ್ಪಿದ್ದು, ನಿಲ್ದಾಣದ ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳೆದ್ದಿವೆ.
ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ ನವೀನ್ ಕುಮಾರ್ ಅರೋರಾ ಎಂಬುವರು ರೈಲು ಬರುವ ಸಮಯದಲ್ಲಿ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಮೆಟ್ರೋ ನಿಲ್ದಾಣಗಳಲ್ಲಿನ ಸುರಕ್ಷತೆ ಬಗ್ಗೆ ಚರ್ಚೆಗೆ ಮತ್ತೆ ನಾಂದಿ ಹಾಡಿದೆ.
ಸುಮಾರು 7 ಲಕ್ಷ ಜನರು ನಿತ್ಯ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಹೀಗಿರುವಾಗ ನಿಲ್ದಾಣದಲ್ಲಿ ಸುರಕ್ಷತಾ ಕ್ರಮ ಮುಖ್ಯವಾಗುತ್ತವೆ. ಸಿಸಿ ಕ್ಯಾಮರಾ ಅಳವಡಿಕೆ, ಭದ್ರತಾ ಸಿಬ್ಬಂದಿ ಹೊರತಾಗಿಯೂ ಹಲವು ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಬೇಕಾಗುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ನಿಲ್ದಾಣದಲ್ಲಿ 'ಪ್ಲಾಟ್ಫಾರ್ಮ್ ಸ್ಕ್ರೀನ್ ಡೋರ್' (ಪಿಎಸ್ಡಿ ದ್ವಾರ) ಇಲ್ಲದಿರುವುದು ದೊಡ್ಡ ಹಿನ್ನಡೆಯಾಗಿದೆ. ಈಗಾಗಲೆ ಮುಂಬೈ ಹಾಗೂ ಚೆನ್ನೈನ ಮೆಟ್ರೋ ನಿಲ್ದಾಣಗಳಲ್ಲಿ ಸ್ಕ್ರೀನ್ ಡೋರ್ ಅಳವಡಿಸಲಾಗಿದೆ. ಹೊಸ ವಿಧಾನದಿಂದಾಗಿ ಜನದಟ್ಟಣೆ ಹೆಚ್ಚಿರುವ ಮೆಟ್ರೋ ನಿಲ್ದಾಣಗಳಲ್ಲಿ ಸಂಭವಿಸುವ ಅವಡಗಳಿಗೆ ಆಸ್ಪದ ಇರುವುದಿಲ್ಲ.
ಪ್ರಯಾಣಿಕರು ನಿಲ್ದಾಣದ ಪ್ಲಾಟ್ಫಾರ್ಮ್ಗಳಲ್ಲಿ ರೈಲಿಗಾಗಿ ಕಾಯುತ್ತಿರುವಾಗ, ಕೆಲವರು ಬೇಜವಾಬ್ದಾರಿ ತೋರುತ್ತಾರೆ. ಅಲ್ಲದೆ, ಕೆಲ ಮಕ್ಕಳು ಓಡಾಡುತ್ತಿರುತ್ತಾರೆ. ಇಂತಹವರಿಗೆ ಎಚ್ಚರಿಕೆ ನೀಡಲು ಭದ್ರತಾ ಸಿಬ್ಬಂದಿ ಹೆಣಗಾಡುವಂತಾಗಿದೆ.
ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಸಂಭವಿಸುತ್ತಿರುವ ಹಿನ್ನೆಲೆ, ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲು ಪ್ಲಾಟ್ಾಮ್ರ್ಗಳಿಗೆ ಪಿಎಸ್ಡಿ ದ್ವಾರ ಅಳವಡಿಸಲು ಬಿಎಂಆರ್ಸಿಎಲ್ ಮುಂದಾಗಿದೆ. ಈ ಸಂಬಂಧ ಈಗಾಗಲೇ ಟೆಂಡರ್ ಕರೆದಿದ್ದು, ಅಲ್ಸ್ಟಾಮ್ ಟ್ರಾನ್ಸ್ಪೋರ್ಟ್ ಇಂಡಿಯಾ ಸಂಸ್ಥೆ ಟೆಂಡರ್ ಪಡೆದುಕೊಂಡಿದೆ. ಮುಂದಿನ ಹಂತದಲ್ಲಿ ಪಿಎಸ್ಡಿ ದ್ವಾರ ಅಳವಡಿಕೆ ಕಾರ್ಯ ಆಗಬೇಕಿದೆ.
ಪ್ರಯಾಣಿಕರ ಸುರಕ್ಷತೆಗಾಗಿ ನಾಡಪ್ರಭು ಕೆಂಪೇಗೌಡ ಇಂಟರ್ಚೇಂಜ್ ಮೆಟ್ರೋ ನಿಲ್ದಾಣದಲ್ಲಿ ನೇರಳೆ ಮಾರ್ಗದ ಪ್ಲಾಟ್ಫಾರ್ಮ್ನಲ್ಲಿ ಕಾಯಂ ಬ್ಯಾರಿಕೇಡ್ ಅಳವಡಿಸಲಾಗಿದೆ. ಪ್ರಯಾಣಿಕರಿಗೆ ಇದು ತಕ್ಕಷ್ಟು ಸುರಕ್ಷತೆ ನೀಡುತ್ತದೆ. ಇದೊಂದು ಉತ್ತಮ ಕ್ರಮವೇ ಆಗಿದ್ದರೂ, ಶಾಶ್ವತ ಪರಿಹಾರವಲ್ಲ. ಮೇಲಾಗಿ ಇದು ತೋರಿಕೆಗೆ ಮಾಡಿದ ವ್ಯವಸ್ಥೆಯಂತಿದೆ. ಬ್ಯಾರಿಕೇಡ್ ಮಧ್ಯೆ ಅಂತರಗಳಿದ್ದು, ಈಗಲೂ ಆತ್ಮಹತ್ಯೆ ಕೃತ್ಯಗಳಿಗೆ ಮುಕ್ತ ಅವಕಾಶ ನೀಡಿದಂತಾಗಿದೆ. ವಿಪರೀತ ಜನದಟ್ಟಣೆಗೆ ಸಾಯಾಗುವ ಈ ನಿಲ್ದಾಣದಲ್ಲಿ ಬೆರಳೆಣಿಯ ಭದ್ರತಾ ಸಿಬ್ಬಂದಿ ಇರುವುದರಿಂದ ನಿರ್ವಹಣೆ ಸುಲಭವಲ್ಲ. ವಿಚಿತ್ರವೆಂದರೆ, ನೇರಳೆ ಮಾರ್ಗದ ಪ್ಲಾಟ್ಾಮ್ರ್ನಲ್ಲಿ ಬ್ಯಾರಿಕೇಡ್ ಅಳವಡಿಸಿರುವ ಬಿಎಂಆರ್ಸಿಎಲ್, ಹಸಿರು ಮಾರ್ಗದ ಪ್ಲಾಟ್ಫಾರ್ಮ್ನಲ್ಲಿ ಈ ವ್ಯವಸ್ಥೆ ಕಲ್ಪಿಸುವಲ್ಲಿ ಉದಾಸೀನ ತೋರಿದೆ. ಸ್ವಯಂಚಾಲಿತ ಸ್ಕ್ರೀನ್ಡೋರ್ಗಳೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬಲ್ಲದು ಎಂಬುದು ಗೊತ್ತಿದ್ದರೂ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬುದು ಪ್ರಜ್ಞಾವಂತ ಪ್ರಯಾಣಿಕರ ಆಕ್ರೋಶ.
ಆಗಾಗ್ಗೆ ಕೈಕೊಡುತ್ತಿರುವ ಸಿಗ್ನಲಿಂಗ್ ಸಮಸ್ಯೆ ನಮ್ಮ ಮೆಟ್ರೋ ಸುಗಮ ಸಂಚಾರಕ್ಕೆ ಅಡತಡೆ ಉಂಟು ಮಾಡುತ್ತಿದೆ. ಇತ್ತೀಚೆಗಂತೂ ಸಿಗ್ನಲಿಂಗ್ ಸಮಸ್ಯೆ ಹೆಚ್ಚು ಎಂಬಂತಾಗಿದೆ. ಇದರಿಂದ ಕೆಲ ತಾಸು ನಾಲ್ಕೆ$ದು ನಿಲ್ದಾಣಗಳ ನಡುವೆ ಸೇವೆ ಸ್ಥಗಿತಗೊಳ್ಳುತ್ತದೆ. ಬಳಿಕ ಪ್ರಯಾಣಿಕರು ವಿಧಿಯಿಲ್ಲದೆ ಬಸ್, ಆಟೋ, ಕ್ಯಾಬ್ ಮೂಲಕ ತೆರಳುತ್ತಾರೆ. ಈ ಅವಧಿಯಲ್ಲಿ ಪ್ರಮುಖ ನಿಲ್ದಾಣಗಳಲ್ಲಿ ಜನದಟ್ಟಣೆ ಉಂಟಾಗುತ್ತದೆ.