

ಹುಬ್ಬಳ್ಳಿ: ತಾಲೂಕಿನ ನೂಲ್ವಿ ಪ್ಯಾಕ್ಸ್ ಸಹಕಾರ ಸಂಘದಲ್ಲಿ ಆರಂಭಿಸಿರುವ ಸೋಯಾಬೀನ್ ಖರೀದಿ ಕೇಂದ್ರದಲ್ಲಿ ಗುರುವಾರ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಯಿತು.
ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಫೆಡರೇಶನ್ ಸಹಯೋಗದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಆರಂಭಿಸಿರುವ ಖರೀದಿ ಕೇಂದ್ರದಲ್ಲಿ ವೇದಮೂರ್ತಿ ಎಸ್.ಆರ್. ಹಿರೇಮಠ ಪ್ರಕ್ರಿಯೆಗೆ ಚಾಲನೆ ನೀಡಿದರು.
ಧಾರವಾಡ ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ನಿಂಗನಗೌಡ ಮರಿಗೌಡ್ರ, ನೂಲ್ವಿ ಪ್ಯಾಕ್ಸ್ ಸಹಕಾರ ಸಂಘವು ರೈತರಿಗೆ ಅವಶ್ಯಕ ಕಾರ್ಯಕ್ರಮ ಹಮ್ಮಿಕೊಂಡು ಎಲ್ಲರಿಗೂ ನೆರವಾಗುತ್ತಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಜಗನ್ನಾಥಗೌಡ ಸಿದ್ದನಗೌಡ್ರ, ಪಿಕೆಪಿಎಸ್ ಅಧ್ಯಕ್ಷ ಮುತ್ತನಗೌಡ ಪಾಟೀಲ ಮಾತನಾಡಿದರು.
ಡಿ.ಎಸ್. ಸಿದ್ದನಗೌಡ್ರ, ಸಿ.ಎನ್. ಪಾಟೀಲ, ಗ್ರಾಪಂ ಉಪಾಧ್ಯಕ್ಷ ಅಶೋಕ ಬುಳ್ಳನವರ, ಸಂಘದ ಉಪಾಧ್ಯಕ್ಷ ಜಿ.ಎಸ್. ಜಿಡ್ಡಿ, ನಿರ್ದೇಶಕರಾದ ಬಿ.ಎಸ್. ಸಿದ್ದನಗೌಡ್ರ, ಐ.ಎನ್. ಮೂಗಣ್ಣವರ, ಡಿ.ಸಿ. ಬಾಳಪ್ಪಗೌಡ್ರು, ಜಿ.ಜಿ. ಧರ್ಮಗೌಡ್ರು, ಜಿ.ಎನ್. ಕೊಪ್ಪದ, ಗುರುನಾಥಗೌಡ ಧರ್ಮಗೌಡ್ರು, ಈರವ್ವ ಹುತ್ತನಗೌಡ್ರು, ರುದ್ರವ್ವ ಗಣಾಚಾರಿ, ಸಂಘದ ಸಿಇಒ ಕಲ್ಲನಗೌಡ ಮೂಗಣ್ಣವರ, ಸಿಬ್ಬಂದಿ ಉಪಸ್ಥಿತರಿದ್ದರು.